ಮಂಗಳೂರು : ಬಹು ಓದು ಬಳಗ ಮಂಗಳೂರು ಮತ್ತು ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರು ಇವರ ಸಹಯೋಗದಲ್ಲಿ ಕವಿಗೋಷ್ಠಿ ಮತ್ತು ಪುಸ್ತಕ ಬಿಡುಗಡೆ ಸಮಾರಂಭವು ದಿನಾಂಕ 14 ಡಿಸೆಂಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ ಬಲ್ಮಠ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 10-00 ಗಂಟೆಗೆ ವಿದ್ಯಾರ್ಥಿನಿ ಕುಮಾರಿ ದಿಯಾ ಉದಯ್ ಡಿ. ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಸಾಹಿತಿ ರಘು ಇಡ್ಕಿದು ಇವರು ಆಶಯ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 2-00 ಗಂಟೆಗೆ 300 ಕವಿಗಳ ‘ಕರಾವಳಿ ಕವನಗಳು’ ಪುಸ್ತಕವನ್ನು ಸಂಶೋಧಕರಾದ ಡಾ. ಚಲಪತಿ ಆರ್. ಇವರು ಬಿಡುಗಡೆ ಮಾಡಲಿದ್ದು, ಪ್ರಾಧ್ಯಾಪಕರಾದ ಡಾ. ನಿಕೇತನ ಇವರು ಪುಸ್ತಕ ವಿಮರ್ಶೆ ಮಾಡಲಿದ್ದಾರೆ. ಕವಿ ರಾಧಾಕೃಷ್ಣ ಉಳಿಯತ್ತಡ್ಕ ಇವರು ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಅರವಿಂದ ಚೊಕ್ಕಾಡಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

