ಬೆಂಗಳೂರು : ಕವಿ ಮಿತ್ರರು ಸಂಪದ ಸಾಲು ಪತ್ರಿಕೆ ಮತ್ತು ಶ್ರೀ ಸದಾಶಿವಯ್ಯ ಜರಗನಹಳ್ಳಿ ಇವರ ಸಾರಥ್ಯದ ಸಾಹಿತ್ಯ ಸಂಸ್ಕೃತಿ ವೇದಿಕೆಯ ವತಿಯಿಂದ ದಿನಾಂಕ 18 ಜನವರಿ 2026ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರಿನ ಅಗರ ಗ್ರಾಮದ ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೋ ಸ್ಟೇಷನ್ ಬಳಿ ಶತ ಕವಿಗಳ ‘ಕವಿ ಗೋಷ್ಠಿ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕವನ ವಾಚನದ ವಿಷಯ ಯಾವುದೇ ಆಗಿರಬಹುದು, ಆದರೆ ಕವನಗಳು ಪದ್ಯ ರೂಪದಲ್ಲೇ ಇರಬೇಕು. ಕವಿಗಳು ತಮ್ಮ ಕವನವನ್ನೇ ವಾಚಿಸಬೇಕು. ಸಮಯಾವಕಾಶ : 2 ನಿಮಿಷಗಳು, ಸಾಲುಗಳು : 16 ಸಾಲುಗಳು.
ನೋಂದಣಿ ವಿವರಗಳು : ಆಸಕ್ತ ಕವಿಗಳು ನೋಂದಾಯಿಸಿಕೊಳ್ಳಬಹುದು. ಹೆಸರು ನೋಂದಾಯಿಸಿದವರು ತಪ್ಪದೇ ಕಾರ್ಯಕ್ರಮಕ್ಕೆ ಹಾಜರಾಗಬೇಕು. ಭಾಗವಹಿಸಲು ಸಾಧ್ಯವಾಗದಿದ್ದರೆ ತಮ್ಮ ಬದಲಿಗೆ ಮತ್ತೊಬ್ಬರನ್ನು ಕಳಿಸಬೇಕು.
100 ಕವಿಗಳಿಗೆ ಮಾತ್ರ ಅವಕಾಶ, ಮೊದಲು ಬಂದವರಿಗೆ ಆದ್ಯತೆ, ಉಚಿತ ಪ್ರವೇಶ
ವಾಚಿಸಿದ ಕವನದ ಒಂದು ಪ್ರತಿಯನ್ನು ನಿಮ್ಮ ಸಂಪೂರ್ಣ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳೊಂದಿಗೆ ಆಯೋಜಕರಿಗೆ ನೀಡಬೇಕು.
ವಾಚಿಸಿದ ಕವನಗಳು ಮುಂದಿನ ದಿನಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತವೆ.
ಭಾಗವಹಿಸಿರುವ ಪ್ರತಿಯೊಬ್ಬರಿಗೂ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಗುವುದು.
ನೋಂದಣಿಗಾಗಿ ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಇಮೇಲ್ ವಿಳಾಸಗಳನ್ನು ಈ ಸಂಖ್ಯೆಗೆ ಮೆಸೇಜ್ ಮಾಡಿ: 9448219347, 9740923747 ಇ-ಮೇಲ್ [email protected]
ಕವಿಬಳಗಕ್ಕೆ ಇಲ್ಲಿ ಸೇರಿ : https://chat.whatsapp.com/DhZNEWccQf7Akxadwchths
