ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ಹಿರಿಯ ನಾಗರಿಕರಿಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕವಿಗೋಷ್ಠಿ ಏರ್ಪಡಿಸಿದೆ. ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಅಪಾರವಾಗಿ ಅನುಭವಿರುವ ಹಿರಿಯ ನಾಗರಿಕರು ಕವಿಗೋಷ್ಠಿಯಲ್ಲಿ ಭಾಗವಹಿಸಬಹುದಾಗಿದೆ.
ಅವರು ತಮ್ಮ ಸ್ವರಚಿತ ಕವನವನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡತಕ್ಕದ್ದು. ಕವನಗಳನ್ನು ಪರಿಶೀಲಿಸಿ ಆಯ್ಕೆಗೊಳಿಸಲು ಸಮಿತಿ ರಚಿಸಲಾಗುವುದು. ಕವನ 16 ಗೆರೆಗಳನ್ನು ಮೀರಿರಬಾರದು. ಒಬ್ಬರು ಒಂದು ಕವನವನ್ನು ಮಾತ್ರ ಕಳುಹಿಸಬಹುದು. ಕನ್ನಡ ಭಾಷೆಯ ಚುಟುಕು ಕವನ (4 ಸಾಲಿನ ಗರಿಷ್ಠ 4 ಕವನ)ಗಳನ್ನೂ ಕಳುಹಿಸಬಹುದು. ಲಕೋಟೆಯ ಮೇಲೆ ‘ರಾಜ್ಯೋತ್ಸವ ಹಿರಿಯರ ಕವಿಗೋಷ್ಠಿ’ಗೆ ಎಂದು ಬರೆಯತಕ್ಕದ್ದು. ಕೊಡಗು ಜಿಲ್ಲೆಯ ಹಿರಿಯ ನಾಗರಿಕರಿಗೆ ಮಾತ್ರ ಅವಕಾಶ. ಕವನಗಳನ್ನು ಕಳುಹಿಸಲು ಕಡೆಯ ದಿನಾಂಕ 05 ನವೆಂಬರ್ 2025 ಆಗಿದ್ದು, ಈ ಕೆಳಗಿನ ಮೊಬೈಲ್ ಗಳಿಗೆ ವಾಟ್ಸಪ್ ಮೂಲಕವೂ ಕಳುಹಿಸಬಹುದು. ಕವನದ ಜೊತೆಗೆ ಆಧಾರ್ ಕಾರ್ಡ್ ಅಥವಾ ಹಿರಿಯ ನಾಗರಿಕ ದೃಢೀಕರಣ ಪತ್ರದ ನಕಲನ್ನು ಕಳುಹಿಸಿತಕ್ಕದ್ದು.
ಕಳುಹಿಸಬೇಕಾದ ವಿಳಾಸ : ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ಕೇಶವ ಕಾಮತ್ – 94483 46276, ಮುನೀರ್ ಅಹ್ಮದ್ – 91132 08330 ಮತ್ತು ರೇವತಿ ರಮೇಶ್ – 96632 54829 ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ತಿಳಿಸಿದ್ದಾರೆ.