ಸುಳ್ಯ : ಜಲಶ್ರೀ ಪ್ರತಿಷ್ಠಾನ ಕಡ್ಲಾರು ಹಾಗೂ ಎನ್.ಎ. ಟೈಮ್ಸ್ ಯೂಟ್ಯೂಬ್ ಚಾನಲ್ ಇದರ ಸಂಯುಕ್ತ ಆಶ್ರಯದಲ್ಲಿ ‘ಕವನ ವಾಚನ ವಿಡಿಯೋ ಸ್ಪರ್ಧೆ 2025’ಯನ್ನು ಹಮ್ಮಿಕೊಳ್ಳಲಾಗಿದೆ.
ನಿಯಮಗಳು :
* ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ : 16 – 45 ವರ್ಷದೊಳಗಿನ ಮತ್ತು 45 ವರ್ಷ ಮೇಲ್ಪಟ್ಟ.
* ಕನ್ನಡದಲ್ಲಿನ ಸ್ವರಚಿತ ಕವನವನ್ನು ವಾಚನ ಮಾಡುತ್ತಿರುವಂತಹ ವಿಡಿಯೋವನ್ನು ಮಾಡಿ ಕಳುಹಿಸಿಕೊಡಬೇಕು.
* ಯಾವುದೇ ವ್ಯಕ್ತಿ, ಜಾತಿ, ಧರ್ಮ, ಸಮಾಜ, ಸಂಸ್ಥೆ, ಸರ್ಕಾರಗಳಿಗೆ ಸಂಬಂಧಪಟ್ಟಂತೆ ದ್ವೇಷಪೂರಿತ ಕವನಗಳಿಗೆ ಆಸ್ಪದವಿಲ್ಲ.
* ತಾವು ವಾಚಿಸುವಂತಹ ಕವನವು ಕನಿಷ್ಠ 20 ಸಾಲುಗಳಿಗಿಂತ ಹೆಚ್ಚಿರಲಿ.
* ವಿಡಿಯೋ ರೆಕಾರ್ಡಿಂಗ್ ಮಾಡುವಾಗ ಯಾವುದೇ ಸಂಗೀತವನ್ನು ಬಳಸುವಂತಿಲ್ಲ.
* ಕವನ ವಾಚನವು ಸ್ಪಷ್ಟತೆಯಿಂದ ಕೂಡಿರಲಿ.
* ತಾವು ವಾಚಿಸುವಂತಹ ಕವನವು ಸಾಮಾಜಿಕ ಜಾಲತಾಣ, ಪತ್ರಿಕೆ ಸೇರಿದಂತೆ ಯಾವುದೇ ಮಾಧ್ಯಮಗಳಲ್ಲಿ ಪ್ರಕಟವಾಗಿರಬಾರದು.
* ವಿಡಿಯೋ ಮಾಡುವಾಗ ಲ್ಯಾಂಡ್ ಸ್ಕೇಪ್ ನಲ್ಲಿ ಇರಬೇಕು. (ಅಂದರೆ ಮೊಬೈಲ್ ಅನ್ನು ಅಡ್ಡವಾಗಿ ಹಿಡಿದುಕೊಂಡು ವಿಡಿಯೋ ಮಾಡಬೇಕು).
* ವಿಡಿಯೋ ಮಾಡುವಾಗ ಪ್ರಾರಂಭದಲ್ಲಿ ನಿಮ್ಮ ಹೆಸರು ಮತ್ತು ವಿಳಾಸವನ್ನು ಉಲ್ಲೇಖಿಸಿ, ಇದು ನೀವು ಸ್ವತಃ ರಚಿಸಿದ ಕವನವೆಂದು ದೃಢಪಡಿಸುತ್ತಾ, ಕವನದ ಶೀರ್ಷಿಕೆ ಹೇಳಿ ಕವನ ವಾಚನ ಮಾಡುವುದು ಕಡ್ಡಾಯ.
* ವಿಡಿಯೋದ ಜೊತೆಗೆ ತಮ್ಮ ಆಧಾರ್ ಕಾರ್ಡ್ ಫೋಟೋವನ್ನು ಕಳುಹಿಸಿ.
* ತಾವು ಕಳುಹಿಸಿಕೊಟ್ಟಂತ ವಿಡಿಯೋವನ್ನು ನಾವು ಯೂಟ್ಯೂಬ್ ಗೆ ಅಪ್ಲೋಡ್ ಮಾಡುತ್ತೇವೆ. ತದನಂತರ ಅದರ ವೀಕ್ಷಣೆ (Views) ಮತ್ತು ತೀರ್ಪುಗಾರರ ಅಂಕಗಳನ್ನು ಪರಿಗಣಿಸಿ ಫಲಿತಾಂಶವನ್ನು ನೀಡಲಾಗುವುದು.
* ತಮ್ಮ ಕವನಗಳಿಗೆ ತಾವೇ ಜವಾಬ್ದಾರಿಗಳಾಗಿರುತ್ತೀರಿ ಹೊರತು ಸಂಸ್ಥೆಯಲ್ಲ.
* ಸ್ಪರ್ಧೆಯಲ್ಲಿ ಒಬ್ಬರಿಗೆ ಒಂದು ಕವನವನ್ನು ಮಾತ್ರ ವಾಚಿಸಲು ಅವಕಾಶ.
* ಸಂಘಟಕರ ತೀರ್ಮಾನವೇ ಅಂತಿಮ.
ವಿಡಿಯೋ ಕಳುಹಿಸಿಕೊಡಲು ದಿನಾಂಕ 15 ಜುಲೈ 2025 ಕೊನೆಯ ದಿನವಾಗಿದ್ದು, ವಿಡಿಯೋ ಕಳುಹಿಸಿ ಕೊಡಬೇಕಿರುವ ವಾಟ್ಸಪ್ ನಂಬರ್ +91 91418 40733, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 91 72599 28731