ಮಂಗಳೂರು : ಅಸ್ತಿತ್ವ (ರಿ.) ಮಂಗಳೂರು ಪ್ರಸ್ತುತಪಡಿಸುವ ನಾಟಕೋತ್ಸವದ ಎರಡನೇ ದಿನ ದಿನಾಂಕ 28 ನವೆಂಬರ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ನಿರ್ದಿಗಂತ ತಂಡದವರು ಅಭಿನಯಿಸುವ ‘ಪೊಲಿಟಿಕಲ್ ಪ್ರಿಸನರ್ಸ್’ ಸಂಗೀತ ನಾಟಕವು ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯದ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಲಿದೆ. ಅನುಷ್ ಶೆಟ್ಟಿಯವರು ಸಂಗೀತ ಮತ್ತು ನಿರ್ದೇಶನ ಮಾಡಲಿದ್ದು, ಯಾವುದೇ ಸಭಾ ಕಾರ್ಯಕ್ರಮವಿರುವುದಿಲ್ಲ, ನಾಟಕ ಸರಿಯಾದ ಸಮಯಕ್ಕೆ ಆರಂಭವಾಗುತ್ತದೆ.


