ಬೆಳ್ತಂಗಡಿ: ಯಕ್ಷಧ್ರುವ ಪಟ್ಟ ಫೌಂಡೇಷನ್ ಬೆಳ್ತಂಗಡಿ ಘಟಕದ 3ನೇ ವಾರ್ಷಿಕೋತ್ಸವ ‘ಯಕ್ಷ ಸಂಭ್ರಮ -2024’ ಗುರುವಾಯನಕೆರೆ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ಘಟಕದ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ಇವರ ನೇತೃತ್ವದಲ್ಲಿ 14 ಡಿಸೆಂಬರ್ 2024ರಂದು ನಡೆಯಲಿದ್ದು ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕೇಸರ ಶರತ್ ಕೃಷ್ಣ ಪಡುವೆಟ್ನಾಯ ದಿನಾಂಕ 04 ಡಿಸೆಂಬರ್ 2024ರಂದು ಲೋಕಾರ್ಪಣೆ ಗೊಳಿಸಿದರು.
ಯಕ್ಷ ಧ್ರುವ ಪಟ್ಲ ಫೌಂಡೇಷನ್ ಹಲವಾರು ಅಶಕ್ತ ಕಲಾವಿದರ ಬಾಳಿಗೆ ಬೆಳಕಾಗಿ ಸಮಾಜದ ಮೆಚ್ಚುಗೆಗೆ ಪಾತ್ರವಾಗಿದೆ. 2 ವರ್ಷಗಳಿಂದ ಬೆಳ್ತಂಗಡಿ ತಾಲ್ಲೂಕಿನಲ್ಲಿ ಶಶಿಧರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಉಜಿರೆ ಜನಾರ್ದನ ದೇವಸ್ಥಾನದ ವಠಾರದಲ್ಲಿ ಕಾರ್ಯಕ್ರಮ ನಡೆದಿದೆ. ತಾಲ್ಲೂಕಿನ ವಿವಿಧೆಡೆ ಕಾರ್ಯಕ್ರಮ ಆಯೋಜಿಸುವ ಅವರ ಯೋಚನೆಯಂತೆ, ಈ ಬಾರಿಯ 3ನೇ ವರ್ಷದ ಕಾರ್ಯಕ್ರಮ ಗುರುವಾಯನಕೆರೆ ನವಶಕ್ತಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದರು. ಇದೇ ಸಂದರ್ಭದಲ್ಲಿ ಶರತ್ ಕೃಷ್ಣ ಪಡುವೆಟ್ನಾಯ ಇವರನ್ನು ಗೌರವಿಸಲಾಯಿತು.
ಘಟಕದ ಪದಾಧಿಕಾರಿಗಳಾದ ಸುರೇಶ್ ಶೆಟ್ಟಿ ಲಾಯಿಲ, ಶಿತಿಕಂಠ ಭಟ್, ಭುಜಬಲಿ ಧರ್ಮಸ್ಥಳ, ರಘುರಾಮ ಶೆಟ್ಟಿ, ವಸಂತ ಸುವರ್ಣ, ರವಿ ಚಕ್ಕಿತ್ತಾಯ, ಜಯಪ್ರಕಾಶ್ ಶೆಟ್ಟಿ, ರಾಜು ಶೆಟ್ಟಿ, ಪ್ರಕಾಶ್ ಶೆಟ್ಟಿ ನೊಚ್ಚ, ರವೀಂದ್ರ ಶೆಟ್ಟಿ, ಜಯಂತ ಶೆಟ್ಟಿ, ಕೃಷ್ಣ ಆಚಾರ್ಯ, ವಸಂತ ಶೆಟ್ಟಿ, ಕೃಷ್ಣ ಐತಾಳ ಪಂಜಿರ್ಪು, ವಿಶ್ವನಾಥ ಶೆಟ್ಟಿ, ವೆಂಕಟರಮಣ ಶೆಟ್ಟಿ ಭಾಗವಹಿಸಿದ್ದರು.

