ಬೆಂಗಳೂರು : ಪ್ರಸನ್ನ ಇವರ ಕಲಾಕೃತಿಗಳ ಪ್ರದರ್ಶನ ‘ನಾಟಕವು ಬದುಕಿನೊಳಗೋ ಬದುಕು ನಾಟಕದೊಳಗೋ’ ದಿನಾಂಕ 30 ಅಕ್ಟೋಬರ್ 2025ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ಚಿತ್ರ ಕಲಾ ಪರಿಷತ್ ಗ್ಯಾಲರಿ 4ರಲ್ಲಿ ಉದ್ಘಾಟನೆಗೊಳ್ಳಲಿದೆ.
ಈ ಕಲಾ ಪ್ರದರ್ಶನಕ್ಕೆ ದೆಹಲಿ ಖ್ಯಾತ ಕಲಾ ವಿಮರ್ಶಕರಾದ ರವೀಂದ್ರ ತ್ರಿಪಾಠಿ ಇವರು ಚಾಲನೆ ನೀಡಲಿದ್ದು, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾದ ಪ.ಸ. ಕುಮಾರ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಲಾಕೃತಿಗಳ ಪ್ರದರ್ಶನವು ದಿನಾಂಕ 30 ಅಕ್ಟೋಬರ್ 2025ರಿಂದ 02 ನವೆಂಬರ್ 2025ರ ತನಕ ನಡೆಯಲಿದೆ.

