ಚನ್ನರಾಯಪಟ್ಟಣ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ನಿಲಯ ಚನ್ನರಾಯಪಟ್ಟಣ, ಹಾಗೂ ಪ್ರತಿಮಾ ಟ್ರಸ್ಟ್ ಚನ್ನರಾಯಪಟ್ಟಣ ಸಹಯೋಗದಲ್ಲಿ ನಡೆದ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 05-03-2024ರಂದು ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯಲ್ಲಿರುವ ‘ರಂಗ ಲೋಕ’ದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಾಸನ ಜಿಲ್ಲೆ ಕಾರೆಕೆರೆಯ ಕೃಷಿ ಮಹಾವಿದ್ಯಾಲಯದ ಮುಖ್ಯಾಧಿಕಾರಿಯಾಗಿರುವ ಡಾ. ಎಸ್. ಎನ್. ವಾಸುದೇವನ್ ಮಾತನಾಡಿ “ಮಕ್ಕಳು ಇಂತಹ ಚಟುವಟಿಕೆಗಳಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ. ನಮ್ಮ ಹಿರಿಯರ ಸಂಸ್ಕೃತಿ, ಸಂಪ್ರದಾಯಗಳಿಗೆ ವೈಜ್ಞಾನಿಕ ಹಿನ್ನೆಲೆ ಇದೆ ಅದನ್ನು ನಾವು ಸರಿಯಾಗಿ ಅರ್ಥೈಹಿಸಿಕೊಳ್ಳ ಬೇಕು. ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವುದರಿಂದ ಮಕ್ಕಳ ಬೌದ್ಧಿಕ ಮಟ್ಟವೂ ಹೆಚ್ಚುತ್ತದೆ.” ಎಂದರು.
ವೇದಿಕೆಯಲ್ಲಿ ವಿಸ್ತರಣಾಧಿಕಾರಿಗಳಾದ ರಾಜೇಶ್ ಚೌಹಾಣ್, ನಿಲಯ ಮೇಲ್ವಿಚಾರಕಿ ಶ್ರೀಮತಿ ಉಷಾ ರಾಣಿ ಹಾಗೂ ನಿಲಯ ಪಾಲಕರಾದ ಶ್ರೀಮತಿ ಜೆ. ಎಮ್. ಪ್ರತಿಭಾ ಹಾಗೂ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಅರುಣ್ ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಕಂಸಾಳೆ, ರಂಗಕುಣಿತ, ಕಿರುನಾಟಕ, ಸೋಬಾನೆ ಪದ, ಜನಪದ ಸಮೂಹ ಗೀತ ಗಾಯನ, ಭ್ರೂಣ ಹತ್ಯೆಯ ರೂಪಕ ಹೀಗೆ ಆನೇಕ ಕಾರ್ಯಕ್ರಮಗಳು ಜರಗಿದವು.
1 Comment
ಧನ್ಯವಾದಗಳು ಸರ್