ಚನ್ನರಾಯಪಟ್ಟಣ : ಚನ್ನರಾಯಪಟ್ಟಣದ ಪ್ರತಿಮಾ ಟ್ರಸ್ಟ್ ಇದರ ‘ಪ್ರತಿಮೋತ್ಸವ – 2025’ ಕಾರ್ಯಕ್ರಮವಿ ದಿನಾಂಕ 02 ಫೆಬ್ರವರಿ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಮಂಡ್ಯ ಜಿಲ್ಲೆಯ ಪಾಂಡವಪುರದ ಉಪವಿಭಾಗಾಧಿಕಾರಿಗಳಾದ ಶ್ರೀನಿವಾಸಗೌಡ ಕೆ. ಆರ್. ಮಾತನಾಡಿ “ಮಕ್ಕಳನ್ನು ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿದಷ್ಟು ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚುತ್ತದೆ. ದೈಹಿಕವಾಗಿ ಸದೃಢರಾಗುತ್ತಾರೆ. ಕಲೆ ಸಾಹಿತ್ಯ ನಾಟಕಗಳಲ್ಲಿ ತೊಡಿಸಿವುದರಿಂದ ಮಕ್ಕಳಿಗೆ ಸಾಮಾಜಿಕ ಕಾಳಜಿ ಹೆಚ್ಚುತ್ತದೆ. ಅದು ಇವತ್ತಿನ ಕಾಲ ಘಟ್ಟದ ಮಕ್ಕಳಿಗೆ ತುಂಬಾ ಅಗತ್ಯ ಇದೆ. ನಮ್ಮ ಭಾಷೆ, ಜಲ ಸಂಸ್ಕೃತಿ ದೇಶಾಭಿಮಾನ, ನಾಯಕತ್ವದ ಗುಣಗಳು ಇಂತಹ ಕಡೆ ಮಕ್ಕಳನ್ನು ಸೇರಿಸಿದಾಗ ಮಾತ್ರ ಬೆಳೆಯ ಸಾಧ್ಯ ಎಂದರು. ಮಕ್ಕಳ ಕೈಯಲ್ಲಿ ಗಿಡ ನೆಡಿಸಿ ಪರಿಸರ ಕಾಳಜಿ ಬೆಳಸಿ, ಈ ದೇಶದ ನಾಯಕರ ಪುಸ್ತಕಗಳನ್ನು ಓದಿಸಿ, ಆಗ ನಾಯಕನ ಗುಣಗಳು ಬರುವುದು ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನೀವು ಮೊದಲು ಟೀವಿ ಮೊಬೈಲ್‌ನಿಂದ ದೂರ ಬಂದು ವಾರಕ್ಕೆ ಒಂದು ಪುಸ್ತಕ ಓದಿ. ನಿಮ್ಮನ್ನು ನೋಡಿ ಮಕ್ಕಳು ಕಲಿಯುತ್ತಾರೆ” ಎಂದರು.
ಇನ್ನೋರ್ವ ಅತಿಥಿ ಡಾ. ಮಲ್ಲೇಶ್ ಗೌಡ ಮಾತನಾಡಿ “ಪ್ರತಿಮಾ ಟ್ರಸ್ಟ್ ಮಾಡುವ ತರಬೇತಿ ಶಿಬಿರಗಳಲ್ಲಿ ನಿಮ್ಮ ಮಕ್ಕಳನ್ನು ಸೇರಿಸಿ ಪುಣ್ಯದ ಕೆಲಸ ಮಾಡಿದ್ದೀರಿ. ಇವತ್ತಿನ ದಿನಗಳಲ್ಲಿ ಕೆಲವು ಬುದ್ಧಿವಂತ ಮಕ್ಕಳನ್ನು ನೋಡುತ್ತೇವೆ ಆದರೆ ಅವರಿಗೆ ಎಲ್ಲಿ ಏನಾಗುತ್ತದೆ ಎಂಬುದರ ಅರಿವಿರುವುದಿಲ್ಲ. ಈಗಿನ ಕೆಲವು ಮಕ್ಕಳಲ್ಲಿ ಸಹಜವಲ್ಲದ ಆಸಹಜ ವಿಚಿತ್ರ ನಡವಳಿಕೆಗಳನ್ನು ನಾವು ಕಾಣುತ್ತಿದ್ದೇವೆ. ಇವತ್ತಿನ ಮಕ್ಕಳಿಗೆ ಚಿಕ್ಕಮ್ಮ ದೊಡ್ಡಮ್ಮನಿಗೆ ವ್ಯತ್ಯಾಸ ಗೊತ್ತಿಲ್ಲ, ಅವರಿಗೆ ಗೊತ್ತಿರುವುದು ಒಂದೇ ಆಂಟಿ, ಅಂಕಲ್ ಪಕ್ಕದ ಮನೆಯಲ್ಲಿ ಎಷ್ಟು ಜನರು ಇದ್ದಾರೆ ಎಂಬು ತಿಳಿದಿರುವುದಿಲ್ಲ. ಇಂತಹ ವ್ಯವಸ್ಥೆಯೊಳಗೆ ಮಕ್ಕಳನ್ನ ಬೆಳೆಸುತ್ತಿದ್ದೇವೆ. ಆದರೆ ಇಲ್ಲಿ ಮಕ್ಕಳು ಯಾವುದೇ ಭಯವಿಲ್ಲದೆ, ಅಂಜಿಕೆ ಇಲ್ಲದೆ ನಿರ್ಭಿತಿಯಿಂದ ನಿರರ್ಗಳವಾಗಿ ಮಾತನಾಡುವುದನ್ನ ಕಲಿಯುತ್ತಾರೆ. ಇವರು ಯಾವುದೆ ಅಂಜಿಕೆ ಅಳುಕು ಇಲ್ಲದೆ ಎಲ್ಲವನ್ನೂ ಮುಕ್ತವಾಗಿ ಕಲಿಯುತ್ತಾರೆ. ಮನೆಯಲ್ಲಿ ಇದ್ದರೆ ಟಿ. ವಿ. ಅಥವಾ ಮೊಬೈಲ್‌ಗಳಿಗೆ ಮಾರು ಹೋಗುತ್ತಾರೆ. ಇಲ್ಲಿ ಎಲ್ಲವನ್ನೂ ಕಲಿಯುವ ಮಕ್ಕಳು ಮುಂದೊಂದು ದಿನ ಈ ಮಕ್ಕಳು ಸಮಾಜದಲ್ಲಿ ನಾನು ಹೇಗೆ ಬದುಕ ಬೇಕು ಎಂಬುದನ್ನ ಚೆನ್ನಾಗಿ ಕಲಿಯುತ್ತಾರೆ. ಜೊತೆಗೆ ಇವತ್ತಿನ ದಿನಗಳಲ್ಲಿ ಕಾಂಕ್ರೀ ಟ್ ಸಂಸ್ಕೃತಿಯಿಂದ ಹೊರಬಂದು ಸಾಮಾಜ ಮತ್ತು ಪರಿಸರದೊಂದಿ ಚೆನ್ನಾಗಿ ಬದುಕುತ್ತಾರೆ” ಎಂದ
1 Comment
ನಿಮ್ಮ ಸಹಕಾರಕ್ಕೆ ಹೃದಯ ಪೂರ್ವಕ ಧನ್ಯವಾದಗಳು.