ಪುತ್ತೂರು : ಸರ್ವೆ ಶ್ರೀ ಸುಬ್ರಾಯ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಮಟ್ಟಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಸಂಯೋಜನೆಯಲ್ಲಿ ದಿನಾಂಕ 25 ಜುಲೈ 2025ರಿಂದ 31 ಜುಲೈ 2025ರವರೆಗೆ ಸಾಯಂಕಾಲ 5-00 ಗಂಟೆಯಿಂದ ರಾತ್ರಿ 8-00 ಗಂಟೆವರೆಗೆ ಭೀಷ್ಮ ಭಾರತ ಶೀರ್ಷಿಕೆಯಲ್ಲಿ ಸಂಘದ ಮತ್ತು ಅತಿಥಿ ಕಲಾವಿದರಿಂದ ತಾಳಮದ್ದಳೆ ಸಪ್ತಾಹ ಜರಗಲಿದೆ.
ಈ ಬಗ್ಗೆ ಪೂರ್ವಭಾವಿ ಸಭೆಯು ಪುತ್ತೂರು ಪರ್ಲಡ್ಕದ ಅಗಸ್ತ್ಯ ನಿವಾಸದಲ್ಲಿ ದಿನಾಂಕ 13 ಜುಲೈ 2025ರಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಅಧ್ಯಕ್ಷತೆಯಲ್ಲಿ ಜರಗಿತು. ಸಪ್ತಾಹದಲ್ಲಿ ‘ಗಾಂಗೇಯ’, ‘ಭೀಷ್ಮೊತ್ಪತ್ತಿ’, ‘ಸಾಲ್ವ ಶೃಂಗಾರ’, ‘ಅಂಬಾ ಶಪಥ’, ‘ಗಂಗಾ ಸಾರಥ್ಯ’, ‘ಭೀಷ್ಮ ಸೇನಾಧಿಪತ್ಯ’, ‘ಕರ್ಮಬಂಧ – ಭೀಷ್ಮಪರ್ವ’ ತಾಳಮದ್ದಳೆಯನ್ನು ನಡೆಸಲಾಗುವುದು.
ಸಂಘದ ಉಪಾಧ್ಯಕ್ಷರಾದ ಗುಂಡ್ಯಡ್ಕ ಈಶ್ವರ ಭಟ್, ಗುಡ್ಡಪ್ಪ ಬಲ್ಯ, ಭಾಗವತರಾದ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ಸತೀಶ್ ಕೆ., ಹರಿಣಾಕ್ಷಿ ಜೆ. ಶೆಟ್ಟಿ, ಭಾರತಿ ರೈ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸಭೆಯಲ್ಲಿ ಭಾಗವಹಿಸಿ ಸಪ್ತಾಹದ ಯಶಸ್ಸಿಗೆ ಸಲಹೆಗಳನ್ನು ನೀಡಿದರು. ಕಾರ್ಯದರ್ಶಿ ಆನಂದ ಸವಣೂರು ಸ್ವಾಗತಿಸಿ, ಸಹಕಾರ್ಯದರ್ಶಿ ಅಚ್ಯುತ್ತ ಪಾಂಗಣ್ಣಾಯ ವಂದಿಸಿದರು.