ಕಿನ್ನಿಗೋಳಿ : ಕಲಾಬ್ದಿ ಗೋವಿಂದದಾಸ ಕಾಲೇಜು ಸುರತ್ಕಲ್ ಇವರ ಸಹಕಾರದಲ್ಲಿ ಕಲಾಯುಗ ಹಾಗೂ ಯುಗಪುರುಷ ಕಿನ್ನಿಗೋಳಿಯ ಸಹಯೋಗದಲ್ಲಿ ಕಲಾಯುಗ ಪ್ರಸ್ತುತ ಪಡಿಸಿದ ಚರಿತ್ ಸುವರ್ಣ ನಿರ್ದೇಶನದ ಅಕ್ಷರ ಕೆ.ವಿ. ಇವರ ಸ್ವಯಂವರಲೋಕ ಆಧಾರಿತ ನಾಟಕ ‘ಹುಡುಕಾಟದಲ್ಲಿ’ ಇದರ ಪ್ರಥಮ ಪ್ರದರ್ಶನವು ದಿನಾಂಕ 24 ಮೇ 2025ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯುಗಪುರುಷದ ಭುವನಾಭಿರಾಮ ಉಡುಪರು “ಉತ್ತಮ ತರಬೇತಿ ನೀಡಿ ಯುವ ಕಲಾವಿದರನ್ನು ಸೃಷ್ಟಿ ಮಾಡಿ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಉತ್ತಮ ಪ್ರದರ್ಶನ ನೀಡುವಲ್ಲಿ ಸುರತ್ಕಲ್ ಕಲಾಯುಗ ತಂಡ ಯಶಸ್ವಿಯಾಗಿದೆ” ಎಂದು ಹೇಳಿದರು.
ಕಿನ್ನಿಗೋಳಿ ವಿಜಯಾ ಕಲಾವಿದರು ಸಂಘಟನೆಯ ಅಧ್ಯಕ್ಷ ಶರತ್ ಶೆಟ್ಟಿ, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಹರೀಶ್ ಆಚಾರ್ಯ, ವಿನೋದ್ ಶೆಟ್ಟಿ ಕೃಷ್ಣಾಪುರ, ನರೇಂದ್ರ ಕೆರೆಕಾಡು, ರಾಘು ಗುಜರನ್, ರೇಖಾ ಸುವರ್ಣ ಶುಭ ಹಾರೈಸಿದರು. ನಿರ್ದೇಶಕ ಚರಿತ್ ಸುವರ್ಣ, ಕಲಾವಿದರಾದ ವೈಭವಿ, ಪ್ರೀತೇಶ್ ಕೊಡೆತ್ತೂರು, ಹಿತ ಉಮೇಶ್, ಪ್ರೀತಿ ಭಗತ್, ಚರಣ್ ಎಸ್. ನಾಯ್ಕ್, ಭರತ್, ತೇಜಸ್ವಿನಿ, ಭುವನ್, ಭೂಷಣ್, ಜಿತಿನ್, ಜ್ಞಾನೇಶ್, ಶ್ರವಣ್, ಧನಂಜಯ ಮೂಲ್ಕಿ, ಸಾಗರ್, ಸುಕೇಶ್, ಸಾಗರ್, ತೇಜಸ್ ಭಾಗವಹಿಸಿದ್ದರು. ಸ್ಮಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.