Subscribe to Updates

    Get the latest creative news from FooBar about art, design and business.

    What's Hot

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ಉಷಾ ಕೆ.ವಿ. ಇವರ ‘ವೇದಾಂತ’ ಹಾಗೂ ‘ಸ್ಪಂದನ’ ಕೃತಿಗಳ ಲೋಕಾರ್ಪಣಾ ಸಮಾರಂಭ

    February 26, 2026

    ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮ

    February 26, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮೈಸೂರಿನಲ್ಲಿ ಪ್ರೇರಣಾ ಕಲಾ ಕಾರ್ಯಾಗಾರ | ಜೂನ್ 28
    Sculpture

    ಮೈಸೂರಿನಲ್ಲಿ ಪ್ರೇರಣಾ ಕಲಾ ಕಾರ್ಯಾಗಾರ | ಜೂನ್ 28

    June 12, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು : ಶಿಲ್ಪಿ ಡಾ. ಅರುಣ್ ಯೋಗಿರಾಜ್ ನೇತೃತ್ವದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇವರು ರಾಮಕೃಷ್ಣ ಇನ್ಸಿಟ್ಯೂಟ್ ಫರ್ ಮೋರಲ್ & ಸ್ಪಿರಿಚುವಲ್ ಎಜುಕೇಶನ್ (ರಿಮೆ), ಮೈಸೂರು ಇವರ ಸಹಕಾರದಲ್ಲಿ ಆಯೋಜಿಸುವ ‘ಪ್ರೇರಣಾ ಕಲಾ ಕಾರ್ಯಾಗಾರ’ ದಿನಾಂಕ 28 ಜೂನ್ 2025ರ ಪೂರ್ವಾಹ್ನ ಘಂಟೆ 9.00ರಿಂದ ಸಂಜೆ ಗಂಟೆ ಘಂಟೆ 7.00ರ ವರೆಗೆ ಮೈಸೂರು ಯಾದವಗಿರಿಯ ಕೆ. ಆರ್. ಎಸ್. ಮುಖ್ಯರಸ್ತೆಯಲ್ಲಿರುವ ‘ರಿಮೆ’ ಇನ್ಸಿಟ್ಯೂಟ್ ಫರ್ ಮೋರಲ್ & ಸ್ಪಿರಿಚುವಲ್ ಎಜುಕೇಶನ್ ಇಲ್ಲಿ ನಡೆಯಲಿದೆ.
    ಬೆಳಿಗ್ಗೆ 9.30 ರಿಂದ 9.15ರ ವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದ್ದು, ಬಳಿಕ ಶಿಲ್ಪಿ ಡಾ. ಅರುಣ್ ಯೋಗಿರಾಜ್ ಜೀ ಮೈಸೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಾಗಾರವನ್ನು ರಿಮೆ, ಯಾದವಗಿರಿ, ಮೈಸೂರು ಇದರ ಸಂಚಾಲಕರಾದ ಕರೆಸ್ಪಾಂಡೆಂಟ್ ಪರಮ ಪೂಜ್ಯ ಸ್ವಾಮಿ ಮಹಾಮೇಧಾನಂದ ಜೀ ಉದ್ಘಾಟಿಸಲಿದ್ದಾರೆ.
    ದಿನದ ಮೊದಲ ದಿಕ್ಸೂಚಿ ಉಪನ್ಯಾಸ ಹಾಗೂ ಸಂವಾದದಲ್ಲಿ ‘ಕಲಾ ಬದುಕಿನ ಸಾರ್ಥಕತೆ ಹೇಗೆ?’ ಎಂಬ ವಿಷಯದಲ್ಲಿ ಶಿಲ್ಪಿ ಡಾ. ಅರುಣ್ ಯೋಗಿರಾಜ್ ಉಪನ್ಯಾಸ ನೀಡಲಿದ್ದಾರೆ, ಬಳಿಕ ‘ಕಲೆಯಲ್ಲಿ ಶಾಸ್ತ್ರಜ್ಞಾನ, ಪರಂಪರೆ ಹಾಗೂ ಸಾಂಪ್ರದಾಯಿಕತೆಯ ಮಹತ್ವ’ ಎಂಬ ವಿಷಯದಲ್ಲಿ ನಡೆಯಲಿರುವ ಪ್ಯಾನೆಲ್ ಚರ್ಚೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಿಲ್ಪಿ ಡಾ. ಅರುಣ್ ಯೋಗಿರಾಜ್ ಮೈಸೂರು, ಸಾಮವೇದಿ ಶ್ರೀ ಶ್ರೀಕಾಂತ ಆಚಾರ್ಯ ಮೈಸೂರು, ಹಿರಿಯ ಚಿತ್ರ ಕಲಾವಿದ ಶ್ರೀ ಪಿ. ಎನ್. ಆಚಾರ್ಯ ಉಡುಪಿ, ದೇವಾಲಯ ಹಾಗೂ ಪ್ರತಿಮಾ ನಿರ್ಮಾಣ ಶಿಲ್ಪಿ ಕೆ. ಸತೀಶ್ ಆಚಾರ್ಯ, ಕಾರ್ಕಳ ಭಾಗವಹಿಸಲಿದ್ದು, ಈ ಚರ್ಚೆಯ ಸಮನ್ವಯಕಾರರಾಗಿ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇದರ ಅಧ್ಯಕ್ಷರಾದ ಡಾ. ಎಸ್. ಪಿ. ಗುರುದಾಸ್ ಭಾಗವಹಿಸಲಿದ್ದಾರೆ. ಘಂಟೆ 1.30 ರಿಂದ 2.00ರ ವರೆಗೆ ವಿಶ್ವಕರ್ಮ ಕಲಾ ಪರಿಷತ್ತಿನ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
    ಅಪರಾಹ್ನ ‘ಕಲೆ, ತಂತ್ರಜ್ಞಾನ ಹಾಗೂ ಉದ್ಯಮಶೀಲತೆ’ ಎಂಬ ವಿಷಯದಲ್ಲಿ ನಡೆಯಲಿರುವ ಪ್ಯಾನಲ್ ಚರ್ಚೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಿಲ್ಪಿ ಡಾ. ಅರುಣ್ ಯೋಗಿರಾಜ್, ಮೈಸೂರು ರಥಶಿಲ್ಪಿ ಶ್ರೀ ರಾಜಗೋಪಾಲ ಆಚಾರ್ಯ ಕೋಟೇಶ್ವರ, ಡಾ. ಎ. ಪಿ. ಆಚಾರ್ಯ, ಸಿ ಇ ಒ, ಎ. ಐ. ಸಿ, ಇನ್ಕ್ಯುಬೇಶನ್ ಸೆಂಟರ್ ನಿಟ್ಟೆ ಇವರು ಭಾಗವಹಿಸಲಿದ್ದು, ಸಮನ್ವಯಕಾರರಾಗಿ ಎಸ್. ಕೆ. ಎಫ್, ಎಲಿಕ್ಸರ್ ಇಂಡಿಯಾ ಪ್ರೈ. ಲಿ., ಬನ್ನಡ್ಕ ಇದರ ಆಡಳಿತ ನಿರ್ದೇಶಕರಾದ ಶ್ರೀ ಪ್ರಜ್ವಲ್ ಆಚಾರ್ಯ ಭಾಗವಹಿಸಲಿದ್ದಾರೆ. ಬಳಿಕ ಶಿಲ್ಪಿ ಡಾ. ಅರುಣ್ ಯೋಗಿರಾಜ್ ಜೀ, ಮೈಸೂರು ಇವರ ಅಧ್ಯಕ್ಷತೆಯಲ್ಲಿ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಾರೋಪದ ಬಳಿಕ ಶಿಲ್ಪಿ ಡಾ. ಅರುಣ್ ಯೋಗಿರಾಜ್ ಜೀ, ಇವರ ಕಲಾ ಸ್ಟುಡಿಯೊಗೆ ಅಧ್ಯಯನ ತಂಡ ಭೇಟಿ ನೀಡಲಿದೆ.
    ಸೂಚನೆಗಳು :
    * ಕಾರ್ಯಾಗಾರದ ಎಲ್ಲಾ ಕಾರ್ಯಕ್ರಮಗಳಿಗೆ ಶಿಸ್ತಿನಿಂದ, ಸಮಯಕ್ಕೆ ಸರಿಯಾಗಿ ಭಾಗವಹಿಸುವುದು.
    * ಕಾರ್ಯಾಗಾರದ ಎಲ್ಲಾ ಅವಧಿಗಳಿಗೆ ಭಾಗವಹಿಸಿದವರಿಗೆ ಮಾತ್ರ ಭಾಗವಹಿಸುವಿಕೆ ಪ್ರಮಾಣ ಪತ್ರ ನೀಡಲಾಗುವುದು.
    * ಕಲಾಭ್ಯಾಸಿಗಳು ಬಿಳಿ ಪಂಚೆ ಹಾಗೂ ಬಿಳಿ ಶರಟು/ ಕುರ್ತಾ, ಮಹಿಳೆಯರು ಭಾರತೀಯ ಉಡುಗೆಯನ್ನೇ ಧರಿಸಿರಬೇಕು.
    * ನೋಂದಾವಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ 9482184197 Email: [email protected]

    sculpture visual arts workshop
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ರಂಗ ಶಂಕರದಲ್ಲಿ ‘ಮಾರೀಕಾಡು’ | ಜೂನ್ 17   
    Next Article ವಿಶ್ವಕರ್ಮ ಒಕ್ಕೂಟದಿಂದ ಸಣ್ಣ ಕಥೆ – ಕವನ ಸ್ಪರ್ಧೆ – 2025 | 30 ಜೂನ್ ಕೊನೆಯ ದಿನ
    roovari

    Add Comment Cancel Reply


    Related Posts

    ಉಡುಪಿಯಲ್ಲಿ ‘ಜನಪದ’ ದೇಶೀಯ ಕಲೆಗಳ ಸರಣಿ ಕಾರ್ಯಾಗಾರ | ಫೆಬ್ರವರಿ 28 ಮತ್ತು ಮಾರ್ಚ್ 01

    February 25, 2026

    ಜೋಕ್ಲೆನ ಬಹುಭಾಷಾ ಕವಿಗೋಷ್ಠಿ ಬೊಕ ಕಬಿತೆ ಪುಟ್ಟುನ ಗುಟ್ಟೆಂಚಾ ಕಜ್ಜಕೊಟ್ಯ

    February 23, 2026

    ಶಿಲ್ಪಕಲಾ ಅಕಾಡೆಮಿಯ ‘ಗೌರವ’ ಮತ್ತು ‘ಶಿಲ್ಪಶ್ರೀ’ ಪ್ರಶಸ್ತಿ ಪ್ರಕಟ

    February 21, 2026

    ಇನ್ನೊಂದು ಗಿನ್ನೆಸ್ ದಾಖಲೆಗೆ ಸಜ್ಜಾಗುತ್ತಿದೆ ಮಾಂಡ್ ಸೊಭಾಣ್

    February 21, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.