ಗುರುವಾಯನಕೆರೆ : ರಾಜ್ಯಮಟ್ಟದ ಪ್ರೆಸ್‌ಕ್ಲಬ್ ಕೌನ್ಸಿಲ್ ಬೆಂಗಳೂರು ಇವರು 2023- 24ನೇ ಸಾಲಿನ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳ 12 ಸಾಧಕರಿಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ಪ್ರದಾನ ಮಾಡಿದರು.
ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ದೇಶದ 24 ಪ್ರಸಿದ್ಧ ಸಾಹಿತಿಗಳ ಪೈಕಿ ಕರ್ನಾಟಕದಿಂದ ಒಬ್ಬರಾದ ಲಕ್ಷ್ಮೀಶ ತೋಳ್ಪಾಡಿ ಅವರು ಪ್ರೆಸ್‌ಕ್ಲಬ್ ಅವಾರ್ಡ್ ಸ್ವೀಕರಿಸಿದ್ದಾರೆ. ಪ್ರೆಸ್‌ಕ್ಲಬ್ ಕೌನ್ಸಿಲ್ ಅಧ್ಯಕ್ಷ ರಾಘವೇಂದ್ರಾಚಾರ್ “ನಿರ್ಭೀತಿಯಿಂದ ಸತ್ಯವನ್ನು ಪ್ರಕಟಿಸುತ್ತಾ ಬಂದಿರುವುದರಿಂದ ಈ ಪ್ರಶಸ್ತಿ ಸ್ವೀಕರಿಸಲು ಒಪ್ಪಿ ಬಂದಿದ್ದೇನೆ. ಮಾಧ್ಯಮಗಳು ಸತ್ಯವನ್ನು ಸ್ಪಷ್ಟವಾಗಿ, ಸರಳವಾಗಿ ಯಾವುದೇ ಸಂಕೋಚ ಇಲ್ಲದೇ ಹೇಳಬೇಕು” ಎಂದು ಹೇಳಿದರು.
ಕೌನ್ಸಿಲ್‌ನ ಪ್ರಶಸ್ತಿ ಪುರಸ್ಕೃತ ನಗೆ ಭಾಷಣಕಾರ, ಬರಹಗಾರ ಎಂ.ಎಸ್. ನರಸಿಂಹಮೂರ್ತಿ ಪ್ರಶಸ್ತಿ ಸ್ವೀಕರಿಸಿ, ಕೌನ್ಸಿಲ್‌ನ ಕಾರ್ಯಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಹಾಸ್ಯದಿಂದ ಸಭಿಕರನ್ನು ನಗಿಸುತ್ತಾ ತೋಳ್ಪಾಡಿಯವರಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು ಕರ್ನಾಟಕಕ್ಕೆ ಹೆಮ್ಮೆ ಎಂದರು. ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಆಶಾ ಸೀನಪ್ಪ, ನಾಗರಿಕ ಸೇವಾ ಟ್ರಸ್ಟಿನ ಅಧ್ಯಕ್ಷ ಕೆ. ಸೋಮನಾಥ ನಾಯಕ್, ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಷಿಯೇಷನ್ ಮುಖ್ಯಸ್ಥ ಗಂಡಸಿ ಸದಾನಂದ, ಕಾಂಗ್ರೆಸ್ ಮುಖಂಡ ಶ್ರೀಕಾಂತ್ ಎಂ. ಶಿವಮೊಗ್ಗ, ಸಾಹಿತಿ ಮಣ್ಣೆ ಮೋಹನ್, ಭದ್ರತಾ ವಿಭಾಗದ ಎಸ್.ಪಿ. ಹರಿರಾಮ್ ಶಂಕರ್ ಐಪಿಎಸ್, ಕೌನ್ಸಿಲ್ ಅಧ್ಯಕ್ಷ ರಾಘವೇಂದ್ರಾಚಾರ್, ನಿರ್ದೇಶಕ ಕೊಟ್ರೇಶ್ ಉಪಸ್ಥಿತರಿದ್ದರು.