ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಮೂರ್ನಾಡು ಹೋಬಳಿ ಘಟಕದ ವತಿಯಿಂದ ಹೋಬಳಿ ಘಟಕದ ಶಾಲಾ-ಕಾಲೇಜುಗಳ ಶಿಕ್ಷಕರುಗಳಿಗೆ “ಕನ್ನಡ ಭಾಷೆಯ ಬೆಳವಣಿಗೆಗಾಗಿ ಮಾರ್ಗೋಪಾಯಗಳು” ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಪ್ರಬಂಧ ಸ್ಪರ್ಧೆಯ ವಿಜೇತರುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ದಿನ್ನಕ 26 ಜುಲೈ 2025ರಂದು ಬೆಳಗ್ಗೆ 10-30 ಗಂಟೆಗೆ ಮೂರ್ನಾಡುವಿನ ಪಿ.ಎಂ.ಶ್ರೀ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಜೊತೆಗೆ ಮೂರ್ನಾಡು ಹೋಬಳಿ ಘಟಕದಲ್ಲಿ ಪ್ರಪ್ರಥಮ ಬಾರಿಗೆ ದಿ. ಕೊಕ್ಕಲೆರ ಚಂಗಪ್ಪನವರ ಜ್ಞಾಪಕಾರ್ಥವಾಗಿ ಪತ್ನಿ ನಿವೃತ್ತ ಶಿಕ್ಷಕಿ ಕೊಕ್ಕಲೆರ ಬೋಜಮ್ಮ ಮತ್ತು ಮಕ್ಕಳು ಸ್ಥಾಪಿಸಿದ ದತ್ತಿನಿಧಿ ಸ್ವೀಕಾರ ಹಾಗೂ ಹಿರಿಯ ಸಾಹಿತಿಗಳಾದ ಕಿಗ್ಗಾಲು ಎಸ್. ಗಿರೀಶ್ ಇವರ ‘ಕಣ್ಮರೆಯಾದ ಕಾಂತಾಮಣಿ’ ಪತ್ತೆದಾರಿ ಕಾದಂಬರಿ ಬಿಡುಗಡೆ ಕಾರ್ಯಕ್ರಮವಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ವಹಿಸಲಿದ್ದು, ಉದ್ಘಾಟಕರಾಗಿ ನಿವೃತ್ತ ದೈಹಿಕ ಶಿಕ್ಷಕ ಹಾಗೂ ಕಾಫಿ ಬೆಳೆಗಾರರಾದ ಕಂಬಿರಂಡ ಕಿಟ್ಟು ಕಾಳಪ್ಪ, ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಕೇಶವ ಕಾಮತ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ಮೂರ್ನಾಡು ಗ್ರಾ.ಪಂ. ಅಧ್ಯಕ್ಷರಾದ ಕುಶನ್ ರೈ, ಹೊದ್ದೂರು ಗ್ರಾಮ ಪಂಚಾಯತಿ ಅಧ್ಯಕ್ಷರು ಶ್ರೀ ಹಂಸ, ಮೂರ್ನಾಡು ಪಿ.ಎಂ.ಶ್ರೀ ಶಾಲಾ ಮುಖ್ಯೋಪಾಧ್ಯಾಯನಿ ಪುಷ್ಪಾವತಿ ಹಾಗೂ ತೀರ್ಪುಗಾರರಾದ ಶಕ್ತಿ ದಿನಪತ್ರಿಕೆ ಉಪ ಸಂಪಾದಕರು ಹಾಗೂ ಮಡಿಕೇರಿ ತಾಲೂಕು ಕ.ಸಾ.ಪ. ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್, ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕಿ ದಂಬೇಕೋಡಿ ಸುಶೀಲ, ಸಾಹಿತಿ ಕಿಗ್ಗಾಲು ಎಸ್. ಗಿರೀಶ್ ಇವರು ಭಾಗವಹಿಸಲಿದ್ದಾರೆ. ಮೂರ್ನಾಡು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕಟ್ಟೆಮನೆ ಮಹಾಲಕ್ಷ್ಮಿ, ಕೋಶಾಧಿಕಾರಿ ಮಡೆಯಂಡ ಸೂರಜ್, ಸಂಘಟನಾ ಕಾರ್ಯದರ್ಶಿಗಳಾದ ಕೊಂಪುಳಿರ ಮಮತಾ, ಖಾದರ್, ಅಪ್ಪಚಂಡ ಸುಚಿತಾ ಇವರುಗಳು ಉಪಸ್ಥಿತರಿರಲಿದ್ದಾರೆ.