ಮಂಗಳೂರು : ಕರಾವಳಿ ಲೇಖಕಿಯರ-ವಾಚಕಿಯರ (ಕಲೇವಾ) ಸಂಘದ ನೇತೃತ್ವದಲ್ಲಿ ಸಾಹಿತ್ಯ ಸದನದಲ್ಲಿ ದಿನಾಂಕ 26 ಏಪ್ರಿಲ್ 2025ರಂದು ನಡೆದ ಸಮಾರಂಭದಲ್ಲಿ ಯಶೋದಾ ಜೆನ್ನಿ ಸ್ಮೃತಿಸಂಚಯ ಪ್ರಾಯೋಜಿತ ಸಣ್ಣಕಥಾ ಸಂಕಲನ ಸ್ಪರ್ಧೆಯ ಬಹುಮಾನವನ್ನು ಪ್ರದಾನ ಮಾಡಲಾಯಿತು.
ಗೀತಾ ಕುಂದಾಪುರ ಅವರ ‘ಪಾಂಚಾಲಿಯಾಗಲಾರೆ’ ಸಣ್ಣ ಕಥಾ ಸಂಕಲನಕ್ಕೆ ಈ ಬಹುಮಾನ ಬಂದಿದ್ದು, ಅದನ್ನು ಪ್ರದಾನ ಮಾಡಲಾಯಿತು. ಅಕ್ಷತರಾಜ್ ಪೆರ್ಲ ಇವರ ‘ರಾಜೀ ಪ್ರಸಂಗ’ ನಾಟಕಕ್ಕೆ ನಾಟಕ ರಚನಾ ಹಸ್ತಪ್ರತಿಯ ಬಹುಮಾನ ನೀಡಲಾಯಿತು. ‘ಕಲೇವಾ’ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇಂದಿರಾ ಹಾಲಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ‘ದಶಕದ ಸಣ್ಣ ಕತೆಗಳಲ್ಲಿ ಸ್ತ್ರೀ ಪ್ರತಿನಿಧೀಕರಣ’ ವಿಷಯದ ಬಗ್ಗೆ ಗುಲಾಬಿ ಪೂಜಾರಿ ಮಾತನಾಡಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ವೇದಿಕೆಯಲ್ಲಿದ್ದರು.