ಉಡುಪಿ : ಗಿಲಿ ಗಿಲಿ ಮ್ಯಾಜಿಕ್ ಗಾರುಡಿಗ ಪ್ರೊ. ಶಂಕರ್ ಅಭಿನಂದನ ಸಮಿತಿ ಉಡುಪಿ ಇದರ ವತಿಯಿಂದ ಪ್ರೊ. ಶಂಕರ್ ಅಭಿನಂದನ ಸಮಾರಂಭವನ್ನು ದಿನಾಂಕ 14 ಡಿಸೆಂಬರ್ 2024ರಂದು ಅಪರಾಹ್ನ 3-30 ಗಂಟೆಗೆ ಉಡುಪಿ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಗೋಷ್ಠಿಗಳು, ಪುಸ್ತಕ ಬಿಡುಗಡೆ ಮತ್ತು ಅಭಿನಂದನ ಸಮಾರಂಭ ನಡೆಯಲಿದೆ.
ಮಧ್ಯಾಹ್ನ 3-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, 4-00 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ. ಶಂಕರ್ ಅಭಿನಂದನ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಉಡುಪಿ ವಿಶ್ವನಾಥ್ ಶೆಣೈ ಇವರು ವಹಿಸಲಿದ್ದಾರೆ. 4-35ರಿಂದ ಪ್ರೊ. ಶಂಕರ್ ಜಾದೂ ಜಗತ್ತು ಪ್ರಸ್ತುತಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಶ್ರೀ ಪ. ರಾಮಕೃಷ್ಣ ಶಾಸ್ತ್ರಿ ಇವರ ‘ಪ್ರೊ. ಶಂಕರ್ ಜಾದೂ ಜರ್ನಿ’ ಎಂಬ ಕೃತಿಯನ್ನು ಬೆಂಗಳೂರು ಯಕ್ಷಗಾನ ಅಕಾಡೆಮಿಯ ಪೂರ್ವಾಧ್ಯಕ್ಷರಾದ ಪ್ರೊ. ಎಂ.ಎಲ್. ಸಾಮಗ ಇವರು ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ‘ನನ್ನಪ್ಪ . . .’ ತೇಜಸ್ವಿ ಶಂಕರ್ ಮತ್ತು ‘ಪ್ರೊ. ಶಂಕರ್ ಜೊತೆ ಒಡನಾಟ’ ಸಂವಾದ, ಸಂಜೆ ಗಂಟೆ 6-20ಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ವಿನಯ್ ಹೆಗಡೆ ಇವರಿಂದ ‘ಕಾಸ್ಮಿಕ್ ಸ್ಪ್ಲಾಷ್’ ಗಾಳಿಯಲ್ಲಿ ಚಿತ್ತಾರ ಹಾಗೂ ಗಂಟೆ 7-10ಕ್ಕೆ ಪ್ರೊ. ಶಂಕರ್ ಅಭಿನಂದನ ಕಾರ್ಯಕ್ರಮ ನಡೆಯಲಿದೆ.