ಬೆಂಗಳೂರು : ಕರ್ನಾಟಕ ಸರ್ಕಾರದಿಂದ ನೋಂದಾಯಿತ ಡಾ. ಪು.ತಿ.ನ. ಟ್ರಸ್ಟ್ (ರಿ.) ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ ಇದರ ಸಹಯೋಗದೊಂದಿಗೆ ಆಯೋಜಿಸುವ ಪು.ತಿ.ನ. ಇವರ 120ನೇ ಜನ್ಮದಿನೋತ್ಸವ ಕಾರ್ಯಕ್ರಮವು ದಿನಾಂಕ 17 ಮಾರ್ಚ್ 2025ರ ಸೋಮವಾರದಂದು ಸಂಜೆ ಘಂಟೆ 5:00ರಿಂದ ಬೆಂಗಳೂರಿನ ಮಲ್ಲೇಶ್ವರಂ 14ನೇ ಅಡ್ಡರಸ್ತೆ ಯಲ್ಲಿರುವ ಸೇವಾಸದನದಲ್ಲಿ ನಡೆಯಲಿದೆ.
ಪು. ತಿ. ನ. ಟ್ರಸ್ಟ್ (ರಿ.) ಮಂಡ್ಯ ಇದರ ಅಧ್ಯಕ್ಷರಾದ ಪ್ರೊ. ಎಂ. ಕೃಷ್ಣಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಸುವಿಖ್ಯಾತ ಲೇಖಕರು, ಪತ್ರಕರ್ತರು ಹಾಗೂ ಪ್ರಾಧ್ಯಾಪಕರಾದ ಶ್ರೀ ಎನ್. ಎಸ್. ಶ್ರೀಧರಮೂರ್ತಿ, ಶ್ರೀ ವೈ.ಕೆ.ಮುದ್ದುಕೃಷ್ಣ, ಬೆಂಗಳೂರು, ಶ್ರೀ ಮಂಡ್ಯ ರಮೇಶ್ ಬೆಂಗಳೂರು, ಶ್ರೀ ಬಿ. ಎನ್. ಸುರೇಶ್ ಬೆಂಗಳೂರು, ಶ್ರೀ ಶ್ರೀನಾಥ ಮೇಲುಕೋಟೆ ಮಂಡ್ಯ, ಡಾ. ಸುಮಾರಾಣಿ ಮಂಡ್ಯ, ಶ್ರೀ ಕೆ. ಜೆ. ನಾರಾಯಣ ಮೈಸೂರು, ಶ್ರೀ ಬಿ. ಚಂದ್ರೇಗೌಡ, ಶಿವಮೊಗ್ಗ, ಶ್ರೀ ಕುಮಾರ ಕೊಪ್ಪ. ಮಂಡ್ಯ, ಹಾಗೂ ವಿಶೇಷ ಆಹ್ವಾನಿತರಾಗಿ ಪು. ತಿ. ನ ಟ್ರಸ್ಟ್ (ರಿ), ಮಂಡ್ಯ ಇದರ ಮಾಜಿ ಅಧ್ಯಕ್ಷರಾದ ವಿದ್ವಾನ್ ಡಿ. ಬಾಲಕೃಷ್ಣ ಹಾಗೂ ಪು.ತಿ.ನ ಟ್ರಸ್ಟ್ (ರಿ), ಮಂಡ್ಯ ಇದರ ಮಾಜಿ ಕಾರ್ಯದರ್ಶಿಗಳಾದ ಡಾ. ಸಿ.ಆನಂದರಾಮ ಉಪಾಧ್ಯ ಭಾಗವಹಿಸಲಿದ್ದಾರೆ.
ಸಭಾಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಸಿಂಚನ ಟ್ರಸ್ಟ್ (ರಿ), ಬೆಂಗಳೂರು ಇವರಿಂದ ಬೆಂಗಳೂರಿನ ಶ್ರೀ ಕೃಷ್ಣಮೂರ್ತಿ ತುಂಗ ಇವರ ನಿರ್ದೇಶನದಲ್ಲಿ ಪು. ತಿ. ನ. ವಿರಚಿತ ‘ಹರಿಣಾಭಿಸರಣ’ ಯಕ್ಷಗಾನ ನಡೆಯಲಿರುವುದು.

