ಧರ್ಮಸ್ಥಳ : ಆಶಾಡ ಶ್ರಾವಣ ಮಾಸದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಐವತ್ನಾಲ್ಕನೆಯ ವರ್ಷದ ಪುರಾಣ ಕಾವ್ಯ ವಾಚನ- ಪ್ರವಚನ ಆರಂಭಗೊಂಡಿದ್ದು, ದಿನಾಂಕ 26 ಜುಲೈ 2025ರಂದು ಕುಮಾರವ್ಯಾಸ ಭಾರತದ ದ್ರೌಪದಿಯ ಪಾತ್ರದ ಕುರಿತು ಮಧೂರು ವಿಷ್ಣು ಪ್ರಸಾದ ಕಲ್ಲುರಾಯ ಇವರ ವಾಚನ ಮತ್ತು ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ ಇವರಿಂದ ವ್ಯಾಖ್ಯಾನವು, ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಯ ಎದುರಿನ ಪುರಾಣ ಪ್ರವಚನ ಮಂಟಪದಲ್ಲಿ ನಡೆಯಿತು. ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಹರಸಿದರು.