ಕಾರ್ಕಳ : ಸಾಹಿತ್ಯಾಸಕ್ತರಿಗೆ ಹಾಗೂ ಓದುಗರಿಗೆ ಎಲ್ಲಾ ರೀತಿಯ ಪುಸ್ತಕಗಳು ಹಾಗೂ ಓದಿನ ಅಭಿರುಚಿಯನ್ನು ಬೆಳೆಸುವ ಮಹತ್ವಾಕಾಂಕ್ಷೆಯಿಂದ ಕಾರ್ಕಳದ ಜೋಡುರಸ್ತೆಯ ಅದಿಧನ್ ಎನ್‌ಕ್ಲೇವ್‌ನಲ್ಲಿ ಬೃಹತ್ ಪುಸ್ತಕ ಮತ್ತು ಸ್ಟೇಶನರಿ ವಸ್ತುಗಳ ಮಳಿಗೆ ‘ಪುಸ್ತಕ ಮನೆ’ ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಶುಭಾರಂಭಗೊಂಡಿದೆ.
ಎಲ್ಲಾ ತರಹದ ವಯೋಮಾನದ ವ್ಯಕ್ತಿಗಳಿಗೆ ಪುಸ್ತಕ ಪ್ರಿಯರಿಗೆ ರಿಯಾಯಿತಿ ದರದಲ್ಲಿ ದೊಡ್ಡ ಮಟ್ಟದ ಪುಸ್ತಕ ಸಂಗ್ರಹವಿದೆ. ಕೃತಿಗಳನ್ನು ಅಲ್ಲಿಯೇ ಓದುವ ಅವಕಾಶವನ್ನೂ ಗ್ರಂಥಾಲಯದ ರೂಪದಲ್ಲಿ ವ್ಯವಸ್ಥೆ ಮಾಡಲಾಗಿದೆ. ದೂರದ ಊರುಗಳಿಂದ ಪುಸ್ತಕಗಳನ್ನು ಅಥವಾ ಸಾಮಾಗ್ರಿಗಳನ್ನು ತರಲು ಕಷ್ಟವಾಗುವುದರಿಂದ ಕಾರ್ಕಳದಲ್ಲಿಯೇ ಒಂದು ಹೊಸ ಪರಿಕಲ್ಪನೆಯ “ಪುಸ್ತಕ ಮನೆ” ದಿನಾಂಕ 16-10-2023ರಂದು ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ಇವರಿಂದ ಉದ್ಘಾಟನೆಗೊಂಡಿದೆ.
ವಿಶೇಷತೆ :
ಕಾರ್ಕಳ ‘ಪುಸ್ತಕ ಮನೆ’ ಕ್ರಿಯೇಟಿವ್ ಸಂಸ್ಥೆಯ ಸಪ್ತ ಸಂಸ್ಥಾಪಕರ ಕನಸಿನ ಕೂಸು. ಕಾರ್ಕಳದ ಆಸುಪಾಸಿನ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಜನರಿಗೆ ಯಾವುದೇ ಲೇಖಕರ ಕೃತಿಗಳೂ ಸುಲಭದಲ್ಲಿ ಓದಲು ಸಿಗಬೇಕು ಮತ್ತು ಮುಂದಿನ ಪೀಳಿಗೆಯ ಜನರನ್ನು ಸಾಹಿತ್ಯಾಸಕ್ತರನ್ನಾಗಿಸಿ, ಕೃತಿ ಪರಿಚಯ ಮಾಡಿಸಬೇಕೆಂಬುದು ಹಿರಿಯ ಆಸೆ ಹಾಗೂ ಪುಸ್ತಕ ಮನೆಯಲ್ಲಿ ಕೇವಲ ಪುಸ್ತಕಗಳಷ್ಟೇ ಅಲ್ಲದೆ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವ ಕ್ರೀಯಾಶೀಲ ಆಟದ ವಸ್ತುಗಳು, ಸ್ಟೇಶನರಿ, ಉಡುಗೊರೆಯ ಬೃಹತ್ ಸಂಗ್ರವಿದೆ. ಗ್ರಂಥಾಲಯಗಳಿಗೆ ಅಗತ್ಯವಿರುವ ಪುಸ್ತಕಗಳು ರಿಯಾಯಿತಿ ದರದಲ್ಲಿ ಲಭ್ಯವಿರಲಿದೆ ಮತ್ತು “ಆನ್ ಲೈನ್” ಪುಸ್ತಕ ಖರೀದಿಗೂ ಅವಕಾಶವಿದೆ.
ಪುಸ್ತಕ ಪೋಷಕ ಯೋಜನೆ :
ಈ ಯೋಜನೆಯಲ್ಲಿ ತಾವು ಓದಿದ ಯಾವುದೇ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಕಾರ್ಕಳ ತಾಲೂಕಿನ ಅಗತ್ಯವಿರುವ ಬಡ ವಿದ್ಯಾರ್ಥಿಗಳಿಗೆ ಕೊಡಮಾಡುವ ಹಾಗೂ ಅವರಿಗೆ ಬೇಕಾದ ಎಲ್ಲಾ ರೀತಿಯ ಪುಸ್ತಕಗಳನ್ನು ಒದಗಿಸುವ ಸಮಾಜಮುಖಿ ಚಿಂತನೆಯ ಯೋಜನೆಯನ್ನು ಸಂಸ್ಥೆ ರೂಪಿಸಿದೆ. ಯಾವ ವಿದ್ಯಾರ್ಥಿಯೂ ಸಹ ಪಠ್ಯಪುಸ್ತಕದ ವೆಚ್ಚವನ್ನು ಭರಿಸಲಾಗದೇ ವಿದ್ಯಾಭ್ಯಾಸವನ್ನು ಮುಂದುವರಿಸಲಾಗದಿದ್ದಲ್ಲಿ ಈ ಯೋಜನೆಯು ವಿದ್ಯಾರ್ಥಿಗಳಿಗೆ ಅತ್ಯಂತ ಅನುಕೂಲವಾಗಿ ಪರಿಣಮಿಸಲಿದೆ. ಇದಕ್ಕಾಗಿ ತಾವು ಓದಿ, ತಮಗೆ ಬೇಡವೆನಿಸಿದ ಪುಸ್ತಕಗಳನ್ನು ದಾನರೂಪದಲ್ಲಿ “ಪುಸ್ತಕ ಪೋಷಕ” ಯೋಜನೆಗೆ ನೀಡಬಹುದಾಗಿದೆ.
ಮೆಂಬರ್ ಶಿಪ್ ಕಾರ್ಡ್ :
ಪುಸ್ತಕ ಮನೆಯಲ್ಲಿ ಯಾವುದೇ ವಿಧದ ವಸ್ತು ಅಥವಾ ಪುಸ್ತಕಗಳನ್ನು ಖರೀದಿಸಿದಲ್ಲಿ 10 ರಿಂದ 15 ಶೇಕಡಾ ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ ಮತ್ತು ವಾರ್ಷಿಕ ಮೆಂಬರ್ ಶಿಪ್ ಕಾರ್ಡಿನ ರೂಪದಲ್ಲಿ ಪ್ರತೀ ಖರೀದಿಗೂ ಆಕರ್ಷಕ ದರಕಡಿತ ಸಿಗಲಿದೆ.
ಚಿಣ್ಣರ ಅಚ್ಚು-ಮೆಚ್ಚಿನ ತಾಣ :
ಚಿಣ್ಣರಿಗೆ ಇಲ್ಲಿ ಎಲ್ಲಾ ತರಹದ ಪಾಠ ಪುಸ್ತಕಗಳೊಂದಿಗೆ ಬೇಕಾದ ಎಲ್ಲಾ ರೀತಿಯ ಆಟೋಟದ ವಸ್ತುಗಳು, ಕಥೆ ಪುಸ್ತಕಗಳು, ಡ್ರಾಯಿಂಗ್ ಸಾಧನಗಳು, ಸ್ಟೇಶನರಿ ವಸ್ತುಗಳು ಒಂದೇ ಮಳಿಗೆಯಲ್ಲಿ ದೊರಕಲಿದೆ. ವಿಶೇಷವಾಗಿ ಮಕ್ಕಳು ಇಷ್ಟಪಡುವ ಬೇಬಿಡಾಲ್‌ನ ಬೃಹತ್ ಸಂಗ್ರಹವಿದೆ. ಮಕ್ಕಳ ಕ್ರಿಯಾಶೀಲ ಕಲಿಕೆಗೆ ಪೂರಕವಾಗಿ ಶೈಕ್ಷಣಿಕ ಕಿಟ್ ಇಲ್ಲಿ ವಯೋಮಾನಕ್ಕನುಣವಾಗಿ ರೂಡಿಸಲಾಗಿದೆ. ಇದರಿಂದ ಅತೀ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರ ಮನೋವಿಕಾಸದ ಪೂರಕ ವ್ಯವಸ್ಥೆಗಳು ಒಂದೇ ಕಡೆ ಲಭ್ಯವಿದೆ.