ತೆಕ್ಕಟ್ಟೆ : ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದ ಪುಷ್ಕರಣಿಯಲ್ಲಿ ಯಶಸ್ವೀ ಕಲಾವೃಂದದ ಸಿನ್ಸ್ 1999 ಶ್ವೇತಯಾನದ ಶ್ವೇತ ಸಂಜೆಯ ಮೂರನೇ ದಿನವನ್ನು ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಯ ಸಹಯೋಗದೊಂದಿಗೆ ನಾದ ಮಣಿನಾಲ್ಕೂರು ಇವರ ‘ಪುಷ್ಕರಣಿಯಲ್ಲೊಂದು ಕತ್ತಲ ಹಾಡು’ ಕಾರ್ಯಕ್ರಮವು ದಿನಾಂಕ 25-02-2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಅಡಿಗ ಇವರು ಮಾತನಾಡಿ “ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮವಾಗಬೇಕಾದರೆ ವಾತಾವರಣಗಳು ಪೂರಕವಾಗಿರಬೇಕು. ವಿಶಿಷ್ಠ ಪರಿಕಲ್ಪನೆಯ ನಾದ ಮಣಿನಾಲ್ಕೂರು ಇವರ ‘ಪುಷ್ಕರಣಿಯಲ್ಲೊಂದು ಕತ್ತಲ ಹಾಡು’ ಹೆಚ್ಚು ಅರ್ಥಗರ್ಭಿತ. ಮನಸ್ಸಿನ ಉದ್ವೇಗವನ್ನು ಸಮತೋಲನಕ್ಕೆ ತರುವ ಈ ಹಾಡು ಮಾನಸಿಕ ಪ್ರಸನ್ನತೆಗೆ ಮದ್ದು” ಎಂದು ಹೇಳಿದರು.
ಪ್ರಾಯೋಜಕರಾದ ಶ್ರೀನಿವಾಸ ಅಡಿಗರನ್ನು ಲೆಕ್ಕಪರಿಶೋಧಕರಾದ ಟಿ.ಎನ್. ಪ್ರಭು, ಸಾಹಿತಿ ನರ್ಮದಾ ಪ್ರಭು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್, ರೊಟೇರಿಯನ್ ಸುಧಾಕರ ಶೆಟ್ಟಿ, ಯಶಸ್ವೀ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಗೋಪಾಲ ಪೂಜಾರಿ ಕೊಮೆ ಉಪಸ್ಥಿತರಿದ್ದು ಗೌರವಿಸಿದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಬಳಿಕ ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದ ಪುಷ್ಕರಣಿಯಲ್ಲಿ ನಾದ ಮಣಿನಾಲ್ಕೂರು ಇವರಿಂದ “ಪುಷ್ಕರಣಿಯಲ್ಲೊಂದು ಕತ್ತಲ ಹಾಡು” ಸಂಪನ್ನಗೊಂಡಿತು.