ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಅರ್ಪಿಸುವ ಅಪೂರ್ವ ಸಾಹಿತ್ಯ ಸೇವೆ ‘ಪುಸ್ತಕ ಪ್ರೇಮಿಗಳ ದಿನಾಚರಣೆ’ ಕಾರ್ಯಕ್ರಮವನ್ನು ದಿನಾಂಕ 14 ಫೆಬ್ರವರಿ 2025ರಂದು ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಎಂ. ಮೋಹನ ಆಳ್ವ ಇವರ ಅಧ್ಯಕ್ಷತೆಯಲ್ಲಿ ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರು ಉದ್ಘಾಟನೆ ಮಾಡಲಿರುವರು. ನಾಡಿನ ಪ್ರಸಿದ್ಧ ಸಾಹಿತಿಗಳ 10 ಪುಸ್ತಕ ಬಿಡುಗಡೆ, ಪುಸ್ತಕ ಪ್ರೇಮದ ಚಿತ್ರಕಲಾ ಸ್ಪರ್ಧೆ ಮತ್ತು ಪುಸ್ತಕ ಮೇಳ ಜರಗಳಿವೆ.
ಡಾ. ವಿಶ್ವನಾಥ ಬದಿಕಾನ ಇವರ ‘ಕನ್ನಡ ಜಾನಪದ ಅಧ್ಯಯನದ ಮೊದಲ ಘಟ್ಟ’ ಸಂಶೋಧನಾ ಗ್ರಂಥ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರ ‘ಸೃಷ್ಟಿ ಸಿರಿಯಲಿ ಪುಷ್ಪವೃಷ್ಟಿ’ ಕನ್ನಡ ಕವನ ಸಂಕಲನ, ಶ್ರೀಮತಿ ಅಕ್ಷತಾರಾಜ್ ಪೆರ್ಲ ಇವರ ‘ನೆಲ ಉರುಳು’ ಕನ್ನಡ ನಾಟಕ, ಶ್ರೀ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಇವರ ‘ನೆಪವು ಸಿಕ್ಕಿದೆ ಬದುಕಿಗೆ’ ಕನ್ನಡ ಕವನ ಸಂಕಲನ, ಶ್ರೀ ಕರುಣಾಕರ ಬಳ್ಕೂರು ಇವರ ‘ಬೆಳಕು’ ಕನ್ನಡ ನಾಟಕ, ಡಾ. ಎಸ್.ಎಂ. ಶಿವಪ್ರಕಾಶ್ ಇವರ ‘Technology Vs Ecology’ Fisheries poems in English and Kannada, ಶ್ರೀ ರಘು ಇಡ್ಕಿದು ಇವರ ‘ಪೊನ್ನಂದಣ’ ಕೃತಿ ವಿಮರ್ಶೆ, ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಇವರ ‘ಕಾತೀಶ್ವರ ವಚನಗಳು’ ಆಧುನಿಕ ವಚನಗಳು, ಪ್ರೊ. ಅಕ್ಷಯ ಆರ್. ಶೆಟ್ಟಿ ಇವರ ‘ಅವಳೆಂದರೆ ಬರಿ ಹೆಣ್ಣೆ’ ಕನ್ನಡ ಕಥೆಗಳು, ಪ್ರಕಾಶ್ ವಿ.ಎನ್. ಇವರ ‘ನಮ್ಮವನು ಶ್ರೀರಾಮಚಂದ್ರ’ ಕನ್ನಡ ನಾಟಕ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.