ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಸಂಗೀತ ಭಾರತಿ ಪ್ರತಿಷ್ಠಾನದಿಂದ ‘ರಾಗ್ ವಿಹಾರ್’ ಎಂಬ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಗರದ ಸಂತ ಅಲೋಶಿಯಸ್ ಕಾಲೇಜಿನ ಎಲ್. ಸಿ. ಆರ್. ಐ. ಬ್ಲಾಕ್ ಇದರ ಫಾ. ಎಲ್. ಎಫ್. ರಸ್ಕೀನಾ ಸಭಾಂಗಣದಲ್ಲಿ ದಿನಾಂಕ 10 ನವೆಂಬರ್ 2024ರ ಭಾನುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಪುಣೆಯ ಅಭಿಷೇಕ್ ಬೋರ್ಕರ್ ಅವರ ಸರೋದ್ ವಾದನ ಹಾಗೂ ಧಾರವಾಡದ ಪ್ರಸಿದ್ಧ ಗಾಯಕ ಕುಮಾರ್ ಮರ್ಡೂರು ಅವರ ಹಿಂದೂಸ್ತಾನಿ ಗಾಯನ ನಡೆಯಿತು. ಅಭಿಷೇಕ್ ಬೋರ್ಕರ್ ಅವರ ಸರೋದ್‌ಗೆ ತಬಲಾದಲ್ಲಿ ಬೆಂಗಳೂರಿನ ತ್ರಿಲೋಚನ್ ಕಂಪ್ಲಿ ಸಹಕರಿಸಿದರೆ, ಕುಮಾರ್ ಮರ್ಡೂರು ಅವರ ಹಾಡುಗಾರಿಕೆಗೆ ಹಾರ್ಮೊನಿಯಂನಲ್ಲಿ ಮಂಗಳೂರಿನ ನರೇಂದ್ರ ಎಲ್. ನಾಯಕ್ ಹಾಗೂ ತಬಲಾದಲ್ಲಿ ಬೆಂಗಳೂರಿನ ಜಗದೀಶ್ ಕುರ್ತಕೋಟಿ ಸಹಕರಿಸಿದರು. ಹಿಂದೂಸ್ಥಾನಿ ಗಾಯಕರ ಅದ್ಬುತ ಗಾಯನ ಪ್ರೇಕ್ಷಕರ ಮನಸೋರೆಗೊಂಡಿತ್ತು.
ಕಾರ್ಯಕ್ರಮವನ್ನು ಬೆಂಗಳೂರಿನ ಚಿನ್ನಾಭರಣಗಳ ಮಳಿಗೆ ಸಿ. ಕೃಷ್ಣಯ್ಯ ಚೆಟ್ಟಿ ಮತ್ತು ಕಂಪನಿ ಇದರ ಜಹೀನಾ ಹಾಗೂ ಎಲ್. ಐ. ಸಿ. ಇದರ ಸೀನಿಯರ್ ಬ್ಯಾಂಕ್ ಮ್ಯಾನೇಜರ್ ತುಳಸಿದಾಸ್ ವಿ. ಪವಾಸ್ಕರ್ ಉದ್ಘಾಟಿಸಿದರು. ಸಂಗೀತ ಭಾರತಿಯ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಉಪಾಧ್ಯಕ್ಷ ನರೇಂದ್ರ ಎಲ್. ನಾಯಕ್, ಎಕ್ಸ್‌ಪರ್ಟ್ ಸಮೂಹ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ನಾಯಕ್ ಉಪಸ್ಥಿತರಿದ್ದರು.
ಹಾಂಗ್ಯೊ ಐಸ್‌ಕ್ರೀಮ್, ಎಲ್. ಐ. ಸಿ., ಎಸ್. ಬಿ. ಐ. , ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆ, ಕೆನರಾ ಬ್ಯಾಂಕ್ ಕಾರ್ಯಕ್ರಮದ ಸಹ ಪ್ರಾಯೋಜಕರಾಗಿದ್ದರು.