Subscribe to Updates

    Get the latest creative news from FooBar about art, design and business.

    What's Hot

    ಪರಿಷತ್ತಿನ ಚಾಮರಾಜೇಂದ್ರ ಸಭಾಭವನದಲ್ಲಿ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ

    June 6, 2025

    ಡಾ. ಎಂ.ಮೋಹನ ಆಳ್ವ ಇವರಿಗೆ ‘ಡಾ. ಜಿ. ಪಿ. ರಾಜ ರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’

    June 6, 2025

    ಡಾ. ರಾಗೌ ಸಾಹಿತ್ಯ ಪ್ರಶಸ್ತಿ’ ಹಾಗೂ ‘ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ’ ಪ್ರದಾನ ಸಮಾರಂಭ | ಜೂನ್ 08

    June 6, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಗುರು ಪರಂಪರಾ ಸಂಪ್ರದಾಯ ಬದ್ಧ ಸಂಗೀತ ಕಛೇರಿ
    Music

    ಗುರು ಪರಂಪರಾ ಸಂಪ್ರದಾಯ ಬದ್ಧ ಸಂಗೀತ ಕಛೇರಿ

    November 26, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಉಡುಪಿ : ರಾಗ ಧನ ಉಡುಪಿ (ರಿ) ಸಂಸ್ಥೆ ಆಯೋಜಿಸುವ ರಾಗರತ್ನ ಮಾಲಿಕೆ ಸರಣಿಯ 31ನೇ ‘ರಂಜನಿ ಸಂಸ್ಮರಣಾ ಸಂಗೀತ ಕಛೇರಿ’ ದಿನಾಂಕ 24 ನವೆಂಬರ್ 2024ರ ಆದಿತ್ಯವಾರ ಸಂಜೆ ಘಂಟೆ 3.00 ರಿಂದ 6:30ರ ವರೆಗೆ ಉಡುಪಿ ಪರ್ಕಳದ ‘ಸರಿಗಮ ಭಾರತಿ ಸಂಗೀತ ವಿದ್ಯಾಲಯ’ದಲ್ಲಿ ನಡೆಯಿತು.
    ಪ್ರಸಿದ್ಧ ಸಂಗೀತ ಕಲಾವಿದರಾದ ಬೆಂಗಳೂರಿನ ಶ್ರೀ ಹೆಮ್ಮಿಗೆ ಎಸ್. ಪ್ರಶಾಂತ್ ಇವರು ಸಂಗೀತ ಕಚೇರಿಯನ್ನು ನಡೆಸಿಕೊಟ್ಟರು. ಇವರ ಗುರುಗಳಲ್ಲೊಬ್ಬರಾದ ಶ್ರೇಷ್ಠ ವಿದ್ವಾಂಸ ಕೆ. ವಿ. ನಾರಾಯಣ ಸ್ವಾಮಿಯವರ ಛಾಪನ್ನು ಇವರ ಸಂಗೀತದಲ್ಲಿಯೂ ಕಾಣಬಹುದಾಗಿದೆ. ಶ್ರೀ ಪ್ರಶಾಂತ್ ಅವರು ಆರಿಸಿಕೊಂಡ ಎಲ್ಲಾ ಪ್ರಸ್ತುತಿಗಳಲ್ಲಿಯೂ ಆಯಾ ರಾಗಗಳ ಸಂಚಾರದಲ್ಲಿನ ನಿಖರತೆ, ಸ್ವರಪ್ರಸ್ತಾರಗಳಲ್ಲಿನ ಖಚಿತತೆ, ಲಯ ಬದ್ಧತೆ ಎಲ್ಲವೂ ಎದ್ದು ಕಾಣುತ್ತಿತ್ತು.
    ಅವರು ಆರಿಸಿಕೊಂಡ ವರ್ಣ ನೆರನಮ್ಮಿತಿ -ಕಾನಡಾ- ಅಟತಾಳ ಸಂಪ್ರದಾಯಬದ್ಧವಾಗಿತ್ತು. ಮುಂದಕ್ಕೆ ‘ನೀವಾಡ ನೇಗಾನ’ (ಸಾರಂಗ- ಖಂಡ ಛಾಪು- ತ್ಯಾಗರಾಜ) ಚಿಕ್ಕ ಚೊಕ್ಕದಾದ ಸ್ವರಪ್ರಸ್ತಾರದಿಂದ ಕೂಡಿತ್ತು. ಮುಂದೆ (ಲೇಕನಾ ನಿನ್ನು ಜೂಟಿ- ಅಸಾವೇರಿ- ಆದಿತಾಳ ವಿಳಂಬ) ಶುದ್ಧ ಪಾಠಾಂತರ, ಆಲಾಪನೆ,  ಕಲ್ಪನಾ ಸ್ವರಗಳಿಂದ ಅಲಂಕರಿಸಲ್ಪಟ್ಟಿತ್ತು. ಮುಂದೆ ಪ್ರಸ್ತುತಗೊಂಡ “ರಾಮಾ ಇಕ ನನ್ನು ಬ್ರೋವರಾದಾ- ಶಹನ-ರೂಪಕ- ಪಟ್ಣಂ ಸುಬ್ರಹ್ಮಣ್ಯ ಅಯ್ಯರ್ ಕೃತಿ”- ಆಲಾಪನೆ ಹಾಗೂ ಸ್ವರ ಪ್ರಸ್ತಾರದಲ್ಲಿ ಅವರ ಸಾಧನೆಯ ದೃಢತೆ ಎದ್ದು ಕಾಣುತ್ತಿತ್ತು.
    ಇವರ ಸಬ್ ಮೈನ್ ಕೃತಿ “ಕರಿಕಲಾಭ ಮುಖಮ್” ಎಂಬ ಸಾವೇರಿ ರಾಗದ, ತ್ರಿಶ್ರ ಏಕತಾಳದ- ದೀಕ್ಷಿತರ ಅಪರೂಪವಾಗಿ ಕೇಳಿಬರುವ ಕೃತಿ ‘ಕರಿಕಲಾಭಿ’ ಎಂಬಲ್ಲಿ ಇವರು ಹಾಕಿದ ಕಲ್ಪನಾ ಸ್ವರಗಳಲ್ಲಿ ಗಟ್ಟಿ ಲಯ, ದೃಢವಾದ ಆತ್ಮವಿಶ್ವಾಸದಿಂದೊಡಗೂಡಿದ  ಸ್ವರಗುಚ್ಛಗಳು ಬಹುಕಾಲ ನೆನಪಿನಲ್ಲಿ ಉಳಿಯುವಂಥಾ ಪ್ರಕಾರಗಳು. ಕನ್ನಡ ಗೌಳ ರಾಗದ ಆದಿತಾಳದ “ಓರಜೂಪು” ತ್ಯಾಗರಾಜರ ಕೃತಿಯ ನಂತರ ಪ್ರಧಾನ ಪ್ರಸ್ತುತಿ ಕಾಂಭೋಜಿರಾಗದ ಎವ್ವರಿಮಾಟ- ವಿಳಂಬ-ಆದಿತಾಳ- ತ್ಯಾಗರಾಜ ಕೃತಿ, ವಿಸ್ತಾರವಾದ ಆಲಾಪನೆ (ಪರಮಭಕ್ತ ಪರಾಧೀನುಡನುಚು) ಎಂಬಲ್ಲಿ  ವಿದ್ವತ್ಪೂರ್ಣವಾದ ನೆರವಲ್, ಕಲ್ಪನಾ ಸ್ವರಗಳಿಂದ ಅಲಂಕರಿಸಿದರು. ಶ್ರೀಯುತರ ಗಾಯನದಲ್ಲಿ ವಿದ್ವಾನ್ ಕೆ. ವಿ. ನಾರಾಯಣಸ್ವಾಮಿಯವರ ಶೈಲಿಯನ್ನು ಕಾಣಬಹುದಾಗಿದೆ.
    ತನಿ ಆವರ್ತನದ ಬಳಿಕ ‘ಹೂವ ತರುವರ ಮನೆಗೆ ಹುಲ್ಲತರುವಾ’ ಎಂಬ ಪುರಂದರದಾಸರ ದೇವರ ನಾಮವನ್ನು (ಅಭೇರಿ-ಖಂಡ ಚಾಪು) ಹೃದ್ಯವಾಗಿ ನಿರೂಸಿದರು. ಮುಂದೆ ಸಿಂಧುಭೈರವಿಯಲ್ಲಿ ಮಂಕುತಿಮ್ಮನ ಕಗ್ಗವನ್ನು ಹಾಡಿ ಬೆಹಾಗರಾಗದಲ್ಲಿ ಡಿ. ವಿ. ಜಿ. ಇವರ ‘ಏನೇ ಶುಕಭಾಷಿಣಿ’ (ಆದಿತಾಳ) ‘ಅಂತ:ಪುರ ಗೀತೆ’ಯನ್ನು ಹಾಡಿ ‘ಪವಮಾನ’ ಮಂಗಲದೊಂದಿಗೆ ಸಂಗೀತ ಕಛೇರಿ ಸಂಪನ್ನಗೊಳಿಸಿದರು.
    ಈ ಕಲಾವಿದರಿಗೆ ವಯೊಲಿನ್ ನಲ್ಲಿ ಬೆಂಗಳೂರಿನ ಅನುಭವೀ ಕಲಾವಿದರಾದ ಶ್ರೀಮತಿ ಚಾರುಲತಾ ರಾಮಾನುಜಂ, ಮೃದಂಗದಲ್ಲಿ ವಿದ್ವಾನ್ ಸುನಾದಕೃಷ್ಣ ಅಮೈ ಪ್ರಧಾನ ಕಲಾವಿದರಿಗೆ ಸರಿಸಾಟಿಯಾದ ಉತ್ತಮ ರೀತಿಯ ಸಹಕಾರವನ್ನು ಕೊಟ್ಟಿದ್ದಾರೆ. ಈ ಮೂರೂ ಕಲಾವಿದರ ಮೇಳೈಸುವಿಕೆಯಿಂದ ಕೂಡಿದ ಈ ಸಂಗೀತ ಕಛೇರಿ ದೀರ್ಘಕಾಲ ಸ್ಮೃತಿಪಟಲದಲ್ಲಿ ಉಳಿಯುವಂಥಾದ್ದು. ಇದಕ್ಕೆ ಕಾರಣೀಭೂತರಾದ ಎಲ್ಲಾ ಸಂಗೀತ ಸಂಘಟಕರಿಗೆ, ಸಂಗೀತ ಪ್ರಿಯರಿಗೆ, ಸಂಗೀತಾರಾಧಕರಿಗೆ ತುಂಬು ಹೃದಯದ ನಮನಗಳು.
     ವಿದುಷಿ ಶ್ರೀಮತಿ ವಾರಿಜಾಕ್ಷಿ ಆರ್.ಎಲ್. ಭಟ್, ಉಡುಪಿ.

    Share. Facebook Twitter Pinterest LinkedIn Tumblr WhatsApp Email
    Previous Articleಉಪಾಸನಾ ಮೋಹನ್ ಮಾರ್ಗದರ್ಶನದಲ್ಲಿ ‘ಭಾವಗೀತೆಗಳ ಶಿಬಿರ ಮತ್ತು ಸಂಗೀತ ಸಂಜೆ’
    Next Article ಅರಸೀಕೆರೆಯಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ, ಹೋಬಳಿ ಘಟಕ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ 
    roovari

    Add Comment Cancel Reply


    Related Posts

    ಬೆಂಗಳೂರಿನ ಬಸವನಗುಡಿಯಲ್ಲಿ ‘ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ’ | ಜೂನ್ 07

    June 6, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಗಾಯನ ಸಂಗೀತ ಕಾರ್ಯಾಗಾರ | ಜೂನ್ 14 ಮತ್ತು 15

    June 6, 2025

    ಮೈಸೂರಿನ ನಟನ ರಂಗಶಾಲೆಯಲ್ಲಿ ‘ಕೃಷ್ಣಗೀತೆ’ | ಜೂನ್ 08

    June 6, 2025

    ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ‘ಹಲಸಿನ ಅರಿವಿನ ಹರಿವು’ ತಾಳಮದ್ದಲೆ | ಜೂನ್ 07

    June 5, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.