ಉಡುಪಿ : ರಾಗ ಧನ ಉಡುಪಿ (ರಿ) ಸಂಸ್ಥೆಯ ರಾಗರತ್ನಮಾಲಿಕೆ -30 ‘ಗೃಹಸಂಗೀತ’ ಕಾರ್ಯಕ್ರಮವು ದಿನಾಂಕ 27 ಅಕ್ಟೋಬರ್ 2024ರ ಆದಿತ್ಯವಾರ ಪುತ್ತೂರಿನ ಪಾಂಗಳಾಯಿಯಲ್ಲಿರುವ ಮುಳಿಯ ಕೇಶವ ಪ್ರಸಾದ್ ಅವರ ನಿವಾಸ ‘ಶ್ಯಾಮಲೋಚನಾ’ದಲ್ಲಿ ಸಂಜೆ 3:45 ರಿಂದ ನಡೆಯಲಿದೆ.
ಕಾರ್ಯಕ್ರಮದ ಆರಂಭದಲ್ಲಿ ಅರುಣಾ ಸರಸ್ವತಿ ಅಮೈ ಅವರ ಸಂಗೀತ ಕಛೇರಿಗೆ ಗೌತಮ್ ಪಿ. ಜಿ. ವಯೊಲಿನ್ ಹಾಗೂ ಸುನಾದಕೃಷ್ಣ ಅಮೈ ಮೃದಂಗದಲ್ಲಿ ಸಹಕರಿಸಲಿದ್ದಾರೆ. ನಂತರ ಮಣಿಪಾಲದ ಕೆ .ಆರ್. ರಾಘವೇಂದ್ರ ಆಚಾರ್ಯ ಹಾಗೂ ಶ್ರುತಿ ಗುರುಪ್ರಸಾದ್ ಇವರಿಂದ ‘ಭಕ್ತಿ ಭಾವ ಲಹರಿ’ ಕಾರ್ಯಕ್ರಮ ನಡೆಯಲಿದೆ. ಇವರಿಗೆ ತಬಲಾದಲ್ಲಿ ಮಾಧವ ಆಚಾರ್ ಉಡುಪಿ, ಹಾರ್ಮೋನಿಯಂನಲ್ಲಿ ಪ್ರಸಾದ್ ಕಾಮತ್, ಕೊಳಲಿನಲ್ಲಿ ಲೋಕೇಶ್ ಮೂಡಬಿದ್ರೆ ಹಾಗೂ ರಿದಂ ಪ್ಯಾಡ್ ನಲ್ಲಿ ಕಾರ್ತಿಕ್ ಇನ್ನಂಜೆ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿರುತ್ತಾರೆ.
