ಉಡುಪಿ : ರಾಗ ಧನ ಉಡುಪಿ (ರಿ.) ಸಂಸ್ಥೆಯ ರಾಗರತ್ನಮಾಲಿಕೆ -31 ‘ಗೃಹಸಂಗೀತ’ ಕಾರ್ಯಕ್ರಮವು ದಿನಾಂಕ 24 ನವೆಂಬರ್ 2024ರಂದು ಉಡುಪಿ ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶ್ರೀ ಹೆಮ್ಮಿಗೆ ಎಸ್. ಪ್ರಶಾಂತ್ ಬೆಂಗಳೂರು ಇವರ ಹಾಡುಗಾರಿಕೆಗೆ ಬೆಂಗಳೂರಿನ ಶ್ರೀಮತಿ ಚಾರುಲತಾ ರಾಮಾನುಜಂ ವಯಲಿನ್ ನಲ್ಲಿ ಹಾಗೂ ಶ್ರೀ ಸುನಾದಕೃಷ್ಣ ಅಮೈ ಮೃದಂಗದಲ್ಲಿ ಸಹಕರಿಸಲಿದ್ದಾರೆ ಎಂದು ರಾಗ ಧನ ಉಡುಪಿಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ – 9964140601

