ಬೆಂಗಳೂರು : ಐ.ಟಿ.ಸಿ. ಸಂಗೀತ ಸಂಶೋಧನಾ ಅಕಾಡೆಮಿ ಕೋಲ್ಕತ್ತಾ ಇದರ ಸಹಯೋಗದೊಂದಿಗೆ ಸುರ್ ಸಾಗರ್ ಪ್ರಸ್ತುತ ಪಡಿಸುವ ರಾಗ್ಧಾರಿ ಸಂಗೀತ ಸಂಜೆ ಕಾರ್ಯಕ್ರಮವನ್ನು ದಿನಾಂಕ 07 ಜೂನ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಶ್ರೀ ಚಿತ್ರಾಪುರ ಮಠದಲ್ಲಿ ಆಯೋಜಿಸಲಾಗಿದೆ.
ಶ್ರೀ ಸ್ವರನೇಂದು ಮಂಡಲ್ ಇವರ ಸರೋದ್ ವಾದನ ಮತ್ತು ಶ್ರೀ ಸಾಯಿ ಐಶ್ವರಿ ಮಹಾಶಬ್ದೆ ಇವರ ಹಾಡುಗಾರಿಕೆಗೆ ರೂಪಕ್ ಕಲ್ಲೂರ್ಕರ್ ತಬಲಾ ಹಾಗೂ ಸತೀಶ್ ಕೊಲ್ಲಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.