ಮಂಗಳೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಮತ್ತು ಗಮಕ ಕಲಾ ಪರಿಷತ್ತು ಮಂಗಳೂರು ತಾಲೂಕು ಆಯೋಜಿಸಿದ ‘ಮನೆಮನೆ ಗಮಕ’ ಇದರ 24ನೇ ಪಲ್ಲವ ಕಾರ್ಯಕ್ರಮವು ದಿನಾಂಕ 25 ಸೆಪ್ಟೆಂಬರ್ 2024ರ ಬುಧವಾರದಂದು ಸಂಜೆ 5.00 ಗಂಟೆಗೆ ಸರಿಯಾಗಿ ಉಳ್ಳಾಲ ತಾಲ್ಲೂಕು ಬೀರಿ ಸಮೀಪದ ಕವಿ ಶ್ರೀಶಂಕರ ಶರ್ಮಾ ಕುಳಮರ್ವ ಇವರ ಮನೆ “ಹವಿಷಾ” ದಲ್ಲಿ ನಡೆಯಲಿದೆ.
ಕವಿ ಶಂಕರ ಶರ್ಮ ಕುಳಮರ್ವ ರಚಿಸಿದ “ಉತ್ತರ ಕಾಂಡ ಕಾವ್ಯಧಾರ” ಕಾವ್ಯದ ‘ರಾಮ ನಿರ್ಯಾಣ’ ಭಾಗವನ್ನು ಕವಿಯ ಮುಂದೆಯೇ ವಾಚನ, ವ್ಯಾಖ್ಯಾನ ನಡೆಯಲಿರುವುದು. ಅಂದು ಶ್ರೀ ಸುರೇಶ್ ರಾವ್ ಅತ್ತೂರು ವಾಚಿಸಲಿದ್ದು, ಶ್ರೀ ಸರ್ಪಂಗಳ ಈಶ್ವರ ಭಟ್ ವ್ಯಾಖ್ಯಾನಿಸಲಿದ್ದಾರೆ. :
ಈ ಕಾರ್ಯಕ್ರಮಕ್ಕೆ ಕವಿ ಶ್ರೀ ಶಂಕರ ಶರ್ಮ ಮತ್ತು ಮಗಳು ಶೀಲಾಶಂಕರಿ, ಬಂಧು ಬಾಂಧವರು, ಗಮಕ ಕಲಾಪರಿಷತ್ತು ಮಂಗಳೂರು ಇದರ ಅಧ್ಯಕ್ಷರು ಮತ್ತು ಸದಸ್ಯರು ಸರ್ವರಿಗೂ ಸ್ವಾಗತ ಬಯಸಿದ್ದಾರೆ.

