ಕೋಟ: ಕೋಟದ ಬಳಿ ಇರುವ ಕೋಡಿ ಕನ್ಯಾಣದ ಶ್ರೀ ರಾಮ ಗೆಳೆಯರ ಬಳಗ ಇವರ ಆಶ್ರಯದಲ್ಲಿ ಮೂರನೇ ವರ್ಷದ ‘ರಾಮ ಪರ್ವ’ ಕಾರ್ಯಕ್ರಮ ದಿನಾಂಕ 12 ಏಪ್ರಿಲ್ 2025ರಂದು ಕೋಡಿ ಕನ್ಯಾಣದ ಶ್ರೀರಾಮಮಂದಿರದ ವಠಾರದಲ್ಲಿ ಜರಗಲಿದೆ. ಈ ಕಾರ್ಯಕ್ರಮದಲ್ಲಿ ನೀಡಲಾಗುವ ‘ರಾಮ ಪರ್ವ ಪುರಸ್ಕಾರ’ಕ್ಕೆ ಖ್ಯಾತ ಜಾನಪದ ಕಲಾವಿದೆ ಪದ್ಮಶ್ರೀ ಬಿ. ಮಂಜಮ್ಮ ಜೋಗತಿ ಇವರನ್ನು ಆಯ್ಕೆಮಾಡಲಾಗಿದೆ.
ಕರ್ನಾಟಕದ ಬಳ್ಳಾರಿ ಜಿಲ್ಲೆಯ ಕಲ್ಲುಕಂಬ ಗ್ರಾಮದಲ್ಲಿ ಹನುಮಂತಯ್ಯ ಮತ್ತು ಜಯಲಕ್ಷ್ಮಿ ದಂಪತಿಗಳಿಗೆ ಜನಿಸಿದ ಇವರು ನೃತ್ಯ ಶಿಕ್ಷಕಿ ಕಾಳವ್ವ ಜೋಗತಿ ಅವರ ಬಳಿ ಜೋಗತಿ ನೃತ್ಯವನ್ನು ಕಲಿತರು. ಬಳಿಕ ಮಂಜಮ್ಮ ಇವರು ಕಾಳವ್ವ ಜೋಗತಿಯ ನೃತ್ಯ ತಂಡದಲ್ಲಿ ಖಾಯಂ ನೃತ್ಯಗಾರ್ತಿಯಾಗಿ ಭಾರತದ ವಿವಿಧ ಭಾಗಗಳಲ್ಲಿ ಪ್ರದರ್ಶನ ನೀಡಿದರು. ಕಾಳವ್ವ ಮರಣಾ ನಂತರ ಮಂಜಮ್ಮ ತಂಡದ ನೇತೃತ್ವ ವಹಿಸಿಕೊಂಡು ಜನರಲ್ಲಿ ಕುಣಿತವನ್ನು ಜನಪ್ರಿಯಗೊಳಿಸಿದರು. 2010ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ ಇವರು ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Subscribe to Updates
Get the latest creative news from FooBar about art, design and business.
Next Article ಕೊಡವ ಸಮಾಜದಲ್ಲಿ ‘ಕೊಡವ ಬಲ್ಯ ನಮ್ಮೆ 2025’