ಉಡುಪಿ : ರಾಗ ಧನ ಸಂಸ್ಥೆಯು ದಿನಾಂಕ : 26-06-2022ರಂದು ಹಮ್ಮಿಕೊಂಡ ಗೃಹ ಸಂಗೀತ ಕಾರ್ಯಕ್ರಮ ರಾಗ ರತ್ನ ಮಾಲಿಕೆ -1 ಶ್ರೀಮತಿ ನಯನ ಮತ್ತು ಶ್ರೀ ನರಸಿಂಹ ನಾಯಕ್ ಇವರ ಆತಿಥ್ಯ ಮತ್ತು ಸಹ ಪ್ರಯೋಜತ್ವದಲ್ಲಿ ನಡೆಯಿತು. ಮಣಿಪಾಲದ ಇವರ ನಿವಾಸ “ಶ್ರೀ ನಿಕೇತನ”ದಲ್ಲಿ ಬೆಂಗಳೂರಿನ ಗಾಯಕರಾದ ಶ್ರೀ ಹರಿಹರನ್ ಎಂ.ಬಿ. ಮತ್ತು ಶ್ರೀ ಎಸ್. ಅಶೋಕ್ ಹಾಡುಗಾರಿಕೆಯಲ್ಲಿ ಶ್ರೀ ವಿಶ್ವಜಿತ್ ವಯೊಲಿನ್ ನಲ್ಲಿ, ಶ್ರೀ ಅನಿರುದ್ಧ್ ಎಸ್. ಭಟ್ ಮೃದಂಗದಲ್ಲಿ ಮೋರ್ಸಿಂಗ್ ನಲ್ಲಿ ಶ್ರೀ ಡಿ.ವಿ. ಪ್ರಸನ್ನ ಸಹಕರಿಸಿದರು.
ದಿನಾಂಕ : 14-07-2023ರಂದು ರಾಗ ರತ್ನ ಮಾಲಿಕೆ -2 ಕಾರ್ಯಕ್ರಮವು ನಡೆಯಿತು. ಶ್ರೀಮತಿ ಉಷಾ ಕೆಂಬ್ಬಾರ್ ಇವರ ಆತಿಥ್ಯದಲ್ಲಿ ಮಣಿಪಾಲದ ಇವರ ನಿವಾಸ ‘ಜಲದರ್ಶಿನಿ’ಯಲ್ಲಿ ಶ್ರೀ ಮುಡಿಕೊಂಡಾನ್ ರಮೇಶ್, ಚೆನ್ನೈ – ಇವರ ವೀಣಾ ವಾದನ ಕಛೇರಿ ನಡೆಯಿತು. ಮೃದಂಗದಲ್ಲಿ ಡಾ. ಬಾಲಚಂದ್ರ ಆಚಾರ್ ಮತ್ತು ಶ್ರೀ ಶಿಸುಪಾದಕೃಷ್ಣ ಸಹಕರಿಸಿದರು. ಪೂರ್ವಭಾವಿಯಾಗಿ ‘ನಾಮ ಸಂಕೀರ್ತನೆ – ಶ್ರೀಮತಿ ಉಷಾ ಹೆಬ್ಬಾರ್ ಬಳಗದವರಿಂದ ನಡೆಯಿತು.
ರಾಗ ರತ್ನ ಮಾಲಿಕೆ -3 ದಿನಾಂಕ 13-08-2022ರಂದು ಶ್ರೀಮತಿ ಜ್ಯೋತಿ ಮತ್ತು ಶ್ರೀ ಬಿ. ನರಹರಿ ಇವರ ಆತಿಥ್ಯ ಮತ್ತು ಪ್ರಯೋಜಕತ್ವದಲ್ಲಿ ಮಣಿಪಾಲದ ಡಾಟ್ ನೆಟ್ ನಲ್ಲಿ ಶ್ರೀಮತಿ ಶಾಂತಲಾ ಬಾಲಸುಬ್ರಮಣ್ಯ ಮತ್ತು ಶ್ರೀಮತಿ ಭಾರ್ಗವಿ ಬಾಲಸುಬ್ರಮಣ್ಯ ಇವರ ಕೊಳಲು ವಾದನ ಕಛೇರಿ ಮತ್ತು ಚಿತ್ರವೀಣಾ ಕಾರ್ಯಕ್ರಮವು ನಡೆಯಿತು. ಮೃದಂಗದಲ್ಲಿ ಪಾಲ್ಘಾಟ್ ಮಹೇಶ್ ಕುಮಾರ್ ಮತ್ತು ಘಟಂನಲ್ಲಿ ಶ್ರಿ ಶ್ರೀಜಿತ್ ಸಹಕರಿಸಿದರು.
ರಾಗ ರತ್ನ ಮಾಲಿಕೆ -4 ದಿನಾಂಕ 25-09-2022ರಂದು ಶ್ರೀಮತಿ ವಂದನ ಮತ್ತು ಶ್ರೀ ಪಿ. ಗುರುದಾಸ್ ಶೆಣೈ ಇವರ ಆತಿಥ್ಯ ಮತ್ತು ಸಹ ಪ್ರಯೋಜಕತ್ವದಲ್ಲಿ ಇವರ ನಿವಾಸ ‘ಮಹೇಶ್ ಮಹಾಲಕ್ಷ್ಮಿ’ಯಲ್ಲಿ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ಶ್ರೀಮತಿ ವಂದನಾ ಶೆಣೈ ಉಡುಪಿ ಅವರಿಂದ ‘ಭಜನೆ ಸಂಧ್ಯಾ’ ಕಾರ್ಯಕ್ರಮಕ್ಕೆ ಹಾರ್ಮೋನಿಯಂನಲ್ಲಿ ಶ್ರೀ ಪಿ. ಗುರುದಾಸ್ ಶೆಣೈ, ತಬ್ಲಾದಲ್ಲಿ ಶ್ರೀ ಅಶ್ವತ್ ವೈ. ಶೆಣೈ, ಶ್ರೀ ಚೇತನ್ ನಾಯಕ್ ಕೊಳಲು ವಾದನದಲ್ಲಿ, ಮಂಜೀರದಲ್ಲಿ ಶ್ರೀ ನಾಗರಾಜ್ ಶೇಟ್ ಸಹಕರಿಸಿದರು. ತದನಂತರ ನಡೆದ ಕರ್ನಾಟಕ ಸಂಗೀತ ಕಛೇರಿ ಹಾಡುಗಾರಿಕೆಯಲ್ಲಿ ಕು. ತನ್ಮಯೀ ಉಪ್ಪಂಗಳ, ವಯೋಲಿನ್ ನಲ್ಲಿ ಶ್ರೀಮತಿ ಶರ್ಮಿಳಾ ರಾವ್, ಮೃದಂಗದಲ್ಲಿ ಡಾ. ಬಾಲಚಂದ್ರ ಆಚಾರ್ ಸಹಕರಿಸಿದರು.
ರಾಗ ರತ್ನ ಮಾಲಿಕೆ -5 ದಿನಾಂಕ 15-10-2022ರಂದು ಶ್ರೀಮತಿ ಗಾಯತ್ರಿ ಮನೋಹರ್, ಪರ್ಕಳ ಇವರ ಆತಿಥ್ಯ ಸಹ ಪ್ರಯೋಜಕತ್ವದಲ್ಲಿ ಮಣಿಪಾಲದ ಡಾಟ್ ಸೆಟ್ ನಲ್ಲಿ ಕಾರ್ಯಕ್ರಮವು ನಡೆಯಿತು. ಶ್ರೀ ನಿರಂಜನ್ ದಿಂಡೋಡಿ ಇವರ ಹಾಡುಗಾರಿಕೆಗೆ ವಯೋಲಿನ್ ನಲ್ಲಿ ಮೈಸೂರು ಕೇಶವ್, ಮೃದಂಗದಲ್ಲಿ ಸುನಾದಕೃಷ್ಣ ಅಮೈ ಸಹಕರಿಸಿದರು. ಪೂರ್ವಿಭಾವಿ ಹಾಡುಗಾರಿಕೆಯನ್ನು ಕು. ಅನುಶ್ರೀ ಮಳಿ ನಡೆಸಿಕೊಟ್ಟಳು. ವಯೋಲಿನ್ ನಲ್ಲಿ ಕು. ತನ್ಮಯೀ ಉಪ್ಪಂಗಳ, ಮೃದಂಗದಲ್ಲಿ ಅಜೇಯಕೃಷ್ಣ ಸಹಕರಿಸಿದರು.
ರಾಗ ರತ್ನ ಮಾಲಿಕೆ -6 ದಿನಾಂಕ 19-11-2022ರಂದು ನಮ್ಮ ಸಂಸ್ಥೆಯ ಅಧ್ಯಕ್ಷರಾದ ಡಾ. ಆರತಿ ಹೆಬ್ಬಾರ್ ಮತ್ತು ಡಾ. ಶ್ರೀ ಕಿರಣ್ ಹೆಬ್ಬಾರ್ ಇವರ ಆತಿಥ್ಯ ಹಾಗೂ ಪ್ರಯೋಜಕತ್ವದಲ್ಲಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕಾರ್ಯಕ್ರಮವು ನಡೆಯಿತು. ಚೆನ್ನೈನ ಶ್ರೀ ಅಮೃತ್ ನಾರಾಯಣ್ ಹಾಡುಗಾರಿಕೆಯಲ್ಲಿ, ವೈಭವ್ ರಮಣ್ ವಯೋಲಿನ್ ನಲ್ಲಿ ಮತ್ತು ಮೃದಂಗದಲ್ಲಿ ಶ್ರೀ ನಿಕ್ಷಿತ್ ಟಿ. ಪುತ್ತೂರು ಸಹಕರಿಸಿದರು. ಪೂರ್ವಭಾವಿಯಾಗಿ ಕು. ಮಹತಿ ಕೆ. ಕಾರ್ಕಳ ಇವಳಿಂದ ವಯೋಲಿನ್ ಸೋಲೋ ವಾದನ ಕಛೇರಿ ನಡೆದು ಮೃದಂಗದಲ್ಲಿ ಅಚಿಂತ್ಯ ಕೃಷ್ಣ ಪುತ್ತೂರು ಸಹಕರಿಸಿದರು.
ರಾಗ ರತ್ನ ಮಾಲಿಕೆ -7 ದಿನಾಂಕ 29-12-2022ರಂದು ಶ್ರೀಮತಿ ಉಮಾ ಮತ್ತು ಡಾ. ಮಧುಶಂಕರ್ ಇವರ ಆತಿಥ್ಯದಲ್ಲಿ ಮಣಿಪಾಲದ ಡಾಟ್ ನೆಟ್ ನಲ್ಲಿ ಬೆಂಗಳೂರಿನ ಶ್ರೀ ಶ್ರೀಹರಿ ಭಟ್ ಇವರ ಹಾಡುಗಾರಿಕೆ ಕಾರ್ಯಕ್ರಮವು ನಡೆಯಿತು. ವಯೋಲಿನ್ ನಲ್ಲಿ ಶ್ರೀ ವೇಣುಗೋಪಾಲ್ ಶ್ಯಾನುಭೋಗ್ ಮಂಗಳೂರು ಮತ್ತು ಮೃದಂಗದಲ್ಲಿ ಶ್ರೀ ಪವನ್ ಮಾಧವ್ ಬೆಂಗಳೂರು, ಘಟಂನಲ್ಲಿ ಶ್ರೀ ಶ್ರೀನಿಧಿ ಆರ್. ಕೌಂಡಿನ್ಯ ಬೆಂಗಳೂರು ಸಹಕರಿಸಿದರು. ಆರಂಭದಲ್ಲಿ ಕು. ಸ್ವಸ್ತಿ ಎಂ. ಭಟ್ ಪ್ರಾರ್ಥಿಸಿದ ನಂತರ ಕೆಲವು ಕೃತಿಗಳನ್ನು ಪ್ರಸ್ತುತ ಪಡಿಸಿದಳು.
ರಾಗ ರತ್ನ ಮಾಲಿಕೆ -8 ದಿನಾಂಕ 26-01-2023ರಂದು ನಿಲೋಯ್ ಅಹಶಾನ್ ಡೆಲ್ಲಿ ಇವರ ದ್ರುಪದ್ ಗಾಯನ ಪಕ್ ವಾಜ್ ನಲ್ಲಿ ಶ್ರೀ ರೋಮನ್ ದಾಸ್ ಸಹಕರಿಸಿದರು. ಪೂರ್ವಭಾವಿಯಾಗಿ ಡಾ. ಉದಿತಾ ಚೌಧಿರಿ ಮುಂಬಯಿ ಇವರಿಂದ ಇವರ ಹಿಂದುಸ್ಥಾನಿ ಗಾಯನವು ನಡೆಯಿತು. ಈ ಕಾರ್ಯಕ್ರಮವು ಶ್ರೀ ಜಯಂತ್ ಐತಾಳ್ ಅವರ ರಿಧಿ ಕ್ರಿಯೇಶನ್ಸ್ ಉಡುಪಿ ಸ್ಟುಡಿಯೋದಲ್ಲಿ ಜರುಗಿತು.
ದಿನಾಂಕ 04-02-2023 ಮತ್ತು 05-02-2023ರಂದು ನಮ್ಮ ರಾಗ ಧನ ಸಂಸ್ಥೆಯ ಸಂಗೀತ ತ್ರಿಮೂರ್ತಿ ಉತ್ಸವವು ಮಣಿಪಾಲ ಡಾಟ್ ನೆಟ್ ನಲ್ಲಿ ನಡೆಯಿತು.
ರಾಗ ರತ್ನ ಮಾಲಿಕೆ -9 ದಿನಾಂಕ 20-02-2023ರಂದು ಡಾ. ವಿದ್ಯಾ ಸರಸ್ವತಿ ಮತ್ತು ಡಾ. ಶ್ಯಾಮ್ ಸುಂದರ್ ಎಸ್. ಭಟ್ ಇವರ ಆತಿಥ್ಯ ಮತ್ತು ಪ್ರಯೋಜಕತ್ವದಲ್ಲಿ ಮಣಿಪಾಲದ ‘ಉತ್ಥಾನ’ ನಿವಾಸದಲ್ಲಿ ನಡೆಯಿತು. ಕು. ತನ್ಮಿಯಿ ಹಾಸನಡ್ಕ ಹಾಡುಗಾರಿಕೆ, ವಯೋಲಿನ್ ನಲ್ಲಿ ಶ್ರೀ ಜನಾರ್ದನ ಶ್ರೀನಾಥ್ ಬೆಂಗಳೂರು, ಮೃದಂಗದಲ್ಲಿ ಡಾ. ಅಕ್ಷಯ ನಾರಾಯಣ, ಕಾಂಚನ, ಘಟಂನಲ್ಲಿ ಶ್ರೀ ಶರತ್ ಕೌಶಿಕ್ ಬೆಂಗಳೂರು ಸಹಕರಿಸಿದರು.
ರಾಗ ರತ್ನ ಮಾಲಿಕೆ -10 ದಿನಾಂಕ 19-03-2023ರಂದು ಶ್ರೀಮತಿ ರಂಜಿತಾ ಮತ್ತು ಶ್ರೀ ಅವಿನಾಶ್ ಮಳಿ ಇವರ ಆತಿಥ್ಯ ಮತ್ತು ಪ್ರಯೋಜಕತ್ವದಲ್ಲಿ ಪುತ್ತೂರಿನ ‘ಹರಿಕೃಪ’ದಲ್ಲಿ ಕಾರ್ಯಕ್ರಮ ನಡೆಯಿತು. ಶ್ರೀಮತಿ ಐಶ್ವರ್ಯ ವಿದ್ಯಾ ರಘುನಾಥ್ ಹಾಡುಗಾರಿಕೆಯಲ್ಲಿ ವಯೋಲಿನ್ ನಲ್ಲಿ ಅದಿತಿ ಕೃಷ್ಣ ಪ್ರಕಾಶ್, ಮೃದಂಗದಲ್ಲಿ ಶ್ರೀ ಬಿ.ಎಸ್. ಪ್ರಶಾಂತ್ ಬೆಂಗಳೂರು ಇವರು ಸಹಕರಿಸಿದರು. ಪೂರ್ವಭಾವಿಯಾಗಿ ಕು. ಅನುಶ್ರೀ ಮಳಿ ಹಾಡುಗಾರಿಕೆಯಲ್ಲಿ ಹಾಗೂ ವಯೋಲಿನ್ ನಲ್ಲಿ ಕು.ತನ್ಮಯೀ ಉಪ್ಪಂಗಳ, ಶ್ರೀ ಅಚ್ಚುತ್ಯಕೃಷ್ಣ ಪುತ್ತೂರು ಮೃದಂಗದಲ್ಲಿ ಸಹಕರಿಸಿದರು.
ರಾಗ ರತ್ನ ಮಾಲಿಕೆ -11 ದಿನಾಂಕ 09-04-2023ರಂದು ಶ್ರೀಮತಿ ಲೀಲಾ ಭಟ್ ಮತ್ತು ಶ್ರೀ ನಾರಾಯಣ ಭಟ್ ಕಿನಿಲ ಇವರ ಆತಿಥ್ಯ ಮತ್ತು ಪ್ರಯೋಜಕತ್ವದಲ್ಲಿ ಮಣಿಪಾಲದ ಇವರ ನಿವಾಸ ‘ದೇವೀ ಕೃಪಾ’ದಲ್ಲಿ ಕಾರ್ಯಕ್ರಮ ನಡೆಯಿತು. ಶ್ರೀಮತಿ ರೋಶ್ನಿ ಉಪಧ್ಯಾಯ, ಮಣಿಮುಂಡ ಇವರ ಹಾಡುಗಾರಿಕೆ ವಯೋಲಿನ್ ನಲ್ಲಿ ಕು. ತನ್ಮಯೀ ಉಪ್ಪಂಗಳ, ಮೃದಂಗದಲ್ಲಿ ಶ್ರೀ ಬಾಲಚಂದ್ರ ಭಾಗವತ್ ಸಹಕರಿಸಿದರು. ಪೂರ್ವಭಾವಿಯಾಗಿ ಬಾಲ ಕಲಾವಿದರು ಕೀರ್ತನೆಗಳನ್ನು ಪ್ರಸ್ತುತ ಪಡಿಸಿದರು. ಸಿಯಾ ಬಲ್ಲಾಳ್, ಸ್ವಸ್ತಿ ಎಂ. ಭಟ್, ಪ್ರಣತಿ ಎಸ್. ಭಟ್, ಧೃತಿ ಎಸ್. ಭಟ್, ರೋಶ್ನಿ ಕೆ. ಶೆಟ್ಟಿ, ಅಚಲ ಎ. ರಾವ್, ತೀಕ್ಷಣ್ ಎಸ್. ಶೆಟ್ಟಿ, ವಯೋಲಿನ್ ನಲ್ಲಿ ಕು. ತನ್ಮಯೀ ಉಪ್ಪಂಗಳ ಮತ್ತು ಮೃದಂಗದಲ್ಲಿ ಬಾಲ ಕಲಾವಿದರಾದ ಮಾಸ್ಟರ್ ಪ್ರಜ್ಞಾನ್ ಮತ್ತು ಮಾಸ್ಟರ್ ಅಚಿಂತ್ಯ ಉಡುಪಿ ಸಹಕರಿಸಿದರು.
ರಾಗ ರತ್ನ ಮಾಲಿಕೆ -12 ದಿನಾಂಕ 12-05-2023ರಂದು ಶ್ರೀಮತಿ ಮಾಲತಿ ಮತ್ತು ಶ್ರೀ ದಿನೇಶ್ ಅಮ್ಮಣ್ಣಾಯ ಇವರ ಆತಿಥ್ಯ ಮತ್ತು ಪ್ರಯೋಜಕತ್ವದಲ್ಲಿ ಇವರ ನಿವಾಸ ‘ಉಷಾ ನಿಲಯ’ದಲ್ಲಿ ಮೈಸೂರು ಎ. ಚಂದನ್ ಎ. ಕುಮಾರ್ ಇವರ ಕೊಳಲು ವಾದನ ಕಛೇರಿ ನಡೆಯಿತು. ವಯೋಲಿನ್ ನಲ್ಲಿ ಪುತ್ತೂರು ಆರ್. ಶ್ರೀನಿಧಿ ಬೆಂಗಳೂರು, ಮೃದಂಗದಲ್ಲಿ ಶ್ರೀ ಅನಿರುದ್ಧ್ ಎಸ್. ಭಟ್ ಬೆಂಗಳೂರು ಮತ್ತು ಖಂಜೀರದಲ್ಲಿ ಶ್ರೀ ಸುನಾದ ಆನೂರು ಬೆಂಗಳೂರು ಸಹಕರಿಸಿದರು.
ರಾಗ ಧನ ಸಂಸ್ಥೆಯು ಹಮ್ಮಿಕೊಂಡ ಈ ಕಲಾ ಕೈಂಕರ್ಯವು ಅದೆಷ್ಟು ಸುಂದರವಾಗಿ ವಿದ್ವತ್ಪೂರ್ಣವಾಗಿ ನಡೆದು ಬಂದಿದೆ ಎಂಬುದಕ್ಕೆ ಕಲಾರಸಿಕರೇ ಸಾಕ್ಷಿ.
- ಉಮಾಶಂಕರಿ, ಕಾರ್ಯದರ್ಶಿ, ರಾಗ ಧನ ಉಡುಪಿ