ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ವತಿಯಿಂದ ‘ರಾಗ ಸುಧಾ ರಸ’ ಸಂಗೀತೋತ್ಸವವನ್ನು ದಿನಾಂಕ 14 ನವೆಂಬರ್ 2024ರಿಂದ 25 ನವೆಂಬರ್ 2024ರವರೆಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ತಾಲೂಕಿನ ವಿವಿಧೆಡೆ ಆಯೋಜಿಸಲಾಗಿದೆ.
ದಿನಾಂಕ 14 ನವೆಂಬರ್ 2024ರಂದು ಸಂಜೆ 4-30ಕ್ಕೆ ಮಂಗಳೂರಿನ ಪುರಭವನದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸುವರು. ಆಕಾಶವಾಣಿಯ ಟಿಒಪಿ ಶ್ರೇಣಿ ಪಡೆದ ನಾದಸ್ವರ ವಾದಕ ನಾಗೇಶ್ ಎ. ಬಪ್ಪನಾಡು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾರಾಮ ಬಿ. ತೋಳ್ಪಾಡಿತ್ತಾಯ, ಪ್ರೊ. ರಾಜೇಂದ್ರ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಗುವುದು. ಶ್ರೇಯಾ ಕೊಳತ್ತಾಯ, ನಿರಂಜನ್ ಡಿಂಡೋಡಿ ಇವರಿಂದ ಸಂಗೀತ ಕಛೇರಿ ನಡೆಯಲಿದೆ.
ದಿನಾಂಕ 15 ನವೆಂಬರ್ 2024ರಂದು ಕಾಸರಗೋಡಿನ ಎಡನೀರು ಮಠದಲ್ಲಿ ಸಂಜೆ 4-30ಕ್ಕೆ ಶಿವಾನಂದ ಡಿ. ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದ್ದು, ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಪ್ರೊ. ವಿ. ಅರವಿಂದ್ ಹೆಬ್ಬಾರ್ ಇವರಿಗೆ ‘ಲಲಿತಕಲಾ ಪೋಷಕ ಮಣಿ’ ಪ್ರಶಸ್ತಿ ಪ್ರದಾನ ಮಾಡುವರು. ಚೆನ್ನೈನ ರಾಜ್‌ಕುಮಾರ್ ಭಾರತಿಯವರಿಂದ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ ಪ್ರಸ್ತುತಗೊಳ್ಳಲಿದೆ.
ದಿನಾಂಕ 16 ನವೆಂಬರ್ 2024ರಂದು ಉಡುಪಿಯ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಸಂಜೆ 4-30ಕ್ಕೆ ಪ್ರಜ್ಞಾ ಅಡಿಗ ಇವರಿಂದ ಸಂಗೀತ ಕಛೇರಿ ನಡೆಯಲಿದೆ. ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಸುನಾದ ಪಿ.ಎಸ್. ಇವರಿಗೆ ‘ಮಣಿ ಮತ್ತು ಎಂ.ಕೆ. ವಾರ್ಷಿಕ ಪ್ರಶಸ್ತಿ’ ಪ್ರದಾನ ಮಾಡುವರು. ಹೇರಂಬ ಮತ್ತು ಹೇಮಂತ್ ಇವರಿಂದ ಕೊಳಲು ವಾದನ ನಡೆಯಲಿದೆ.
ದಿನಾಂಕ 17 ನವೆಂಬರ್ 2024ರಂದು ಸುರತ್ಕಲ್‌ನ ಅನುಪಲ್ಲವಿಯಲ್ಲಿರುವ ವಿಶ್ವೇಶತೀರ್ಥ ಸಭಾಂಗಣದಲ್ಲಿ ಬೆಳಿಗ್ಗೆ 9.30ರಿಂದ ಶ್ರೀಕ್ಷೇತ್ರ ಧರ್ಮಸ್ಥಳದ ಕೃತಿಗಳನ್ನಾಧರಿಸಿದ ಸಂಗೀತ ಸ್ಪರ್ಧೆ, ಕಾರ್ಯಾಗಾರ, ವಿಚಾರ ಸಂಕಿರಣ, ಸಂಜೆ 4.30ಕ್ಕೆ ಧರ್ಮಸ್ಥಳದ ನಾದಸ್ವರ ವಾದಕ ವಿದ್ವಾನ್ ಡಿ. ಅಣ್ಣು ದೇವಾಡಿಗ ಇವರಿಗೆ ಎ. ಈಶ್ವರಯ್ಯ ಸಂಸ್ಮರಣಾ ಪ್ರಶಸ್ತಿ ಪ್ರದಾನ ಮತ್ತು ಪ್ರಾರ್ಥನಾ ಸಾಯಿ ಇವರಿಂದ ಸಂಗೀತ ಕಛೇರಿ ನಡೆಯಲಿದೆ.
ದಿನಾಂಕ 18 ನವೆಂಬರ್ 2024ರಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮನೆಯಲ್ಲಿ ಸಂಜೆ 5-00 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಉಷಾ ರಾಮಕೃಷ್ಣರವರಿಗೆ ‘ಯುವ ಕಲಾಮಣಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ದಿನಾಂಕ 19 ನವೆಂಬರ್ 2024ರಂದು ಪುತ್ತೂರಿನ ಮಹಾವೀರ ವೆಂಚರ್ಸ್‌ನ ಸಭಾಂಗಣದಲ್ಲಿ ಸಂಜೆ 4.30ಕ್ಕೆ ಸುಚಿತ್ರಾ ಹೊಳ್ಳ ಶಿಷ್ಯರಿಂದ ಸಂಗೀತ ಕಛೇರಿ, ಕುಂಚಿನಡ್ಕ ಶಕುಂತಲಾ ಕೃಷ್ಣ ಭಟ್ ಇವರಿಗೆ ‘ಹಿರಿಯ ಸಾಧಕ’ ಸನ್ಮಾನ, ಅರ್ಚನಾ ಮತ್ತು ಸಮನ್ವಿಯವರಿಂದ ಗಾಯನ ನಡೆಯಲಿದೆ.
ದಿನಾಂಕ 20 ನವೆಂಬರ್ 2024ರಂದು ಸುರತ್ಕಲ್ ಬಳಿಯ ಚೇಳಾಯ್ರುವಿನಲ್ಲಿರುವ ನಾಟ್ಯಾಂಜಲಿ ಕಲಾ ಅಕಾಡೆಮಿಯಲ್ಲಿ ಕೃಷ್ಣ ಪವನ್ ಕುಮಾರ್ ಇವರಿಂದ ಕೊಳಲು ವಾದನ, ದಿನಾಂಕ 21 ನವೆಂಬರ್ 2024ರಂದು ಸಂಜೆ 6-00 ಗಂಟೆಗೆ ವಿಶ್ವೇಶತೀರ್ಥ ಸಭಾಂಗಣದಲ್ಲಿ ಮೇಧಾ ಉಡುಪರವರ ಕೊಳಲು ವಾದನ, ದಿನಾಂಕ 23 ನವೆಂಬರ್ 2024ರಂದು ಮಂಗಳೂರಿನ ಕದ್ರಿಯ ನೃತ್ಯಭಾರತಿ ಸಭಾಂಗಣದಲ್ಲಿ ಶೋಭಿತಾ ಭಟ್, ಆಶ್ವಿಜಾ ಉಡುಪ ಇವರಿಂದ ಗಾಯನ, ದಿನಾಂಕ 25 ನವೆಂಬರ್ 2024ರಂದು ಸುರತ್ಕಲ್‌ನ ವಿಶ್ವೇಶತೀರ್ಥ ಸಭಾಂಗಣದಲ್ಲಿ ವಿದ್ಯಾಶ್ರೀ ವಿಜಯ ಕಣ್ಣನ್ ಇವರಿಂದ ವೀಣಾ ವಾದನ ನಡೆಯಲಿದೆ.