ಮಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಇವರ ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಅರ್ಪಿಸುವ ‘ರಾಗ ಸುಧಾ ರಸ’ ಸಂಗೀತೋತ್ಸವವು ದಿನಾಂಕ 15-02-2024ರಿಂದ 18-02-2024 ರವರೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ದಿನಾಂಕ 15-02-2024ರಂದು ಸಂಜೆ 4.30ಕ್ಕೆ ಮಂಗಳೂರಿನ ಕಲಾ ಶಾಲೆಯ ವಿದ್ಯಾರ್ಥಿಗಳು ವಯಲಿನ್ ವಾದನ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮವನ್ನು ಶರವು ಶ್ರೀ ರಾಘವೇಂದ್ರ ಶಾಸ್ತ್ರಿಯವರು ದೀಪ ಬೆಳಗಿ ಉದ್ಘಾಟಿಸಲಿದ್ದು, ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಗಂಟೆ 6ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಬೆಂಗಳೂರಿನ ಸ್ಪೂರ್ತಿ ರಾವ್ ಇವರ ಹಾಡುಗಾರಿಕೆಗೆ ವೈಭವ ರಮಣಿ ವಯಲಿನ್, ಅನೂರ್ ವಿನೋದ್ ಶ್ಯಾಮ್ ಮೃದಂಗ ಹಾಗೂ ಮೈಸೂರಿನ ಶರತ್ ಕೌಶಿಕ್ ಘಟಂನಲ್ಲಿ ಸಾಥ್ ನೀಡಲಿದ್ದಾರೆ.
ದಿನಾಂಕ 16-02-2024ರಂದು ಸಂಜೆ 4.30ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಚಿನ್ಮಯಿ ವಿ. ಭಟ್, ಶ್ರೀವರದ ಪಟ್ಟಾಜೆ, ಸುಮನ ಕೆ. ಮತ್ತು ಅನ್ವಿತ ಟಿ. ಇವರ ಹಾಡುಗಾರಿಕೆಗೆ ಬೆಂಗಳೂರಿನ ಸುನಂದ ಪಿ.ಎಸ್. ವಯಲಿನ್ ಹಾಗೂ ಮಂಗಳೂರಿನ ಅವಿನಾಶ್ ಬಿ. ಮೃದಂಗದಲ್ಲಿ ಸಾಥ್ ನೀಡಲಿರುವರು ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ವಾದನ ಕಛೇರಿಯನ್ನು ಕೊಳಲು – ಕೊಚ್ಚಿನ್ ಹರಿಪ್ರಸಾದ್ ಸುಬ್ರಮಣಿಯನ್, ವೀಣೆ – ಬೆಂಗಳೂರಿನ ರಕ್ಷಿತಾ ರಮೇಶ, ಮೃದಂಗ – ಮಂಗಳೂರಿನ ಸುನಾದ ಕೃಷ್ಣ ಅಮೈ ಹಾಗೂ ಘಟಂ – ಶ್ರೀನಿಧಿ ಆರ್. ಕೌಂಡಿನ್ಯ ಇವರುಗಳು ನಡೆಸಿಕೊಡಲಿದ್ದಾರೆ.
ದಿನಾಂಕ 17-02-2024ರಂದು ಸಂಜೆ ಗಂಟೆ 4ಕ್ಕೆ ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ‘ನಾಮಸಂಕೀರ್ತನೆ’, ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಕಿನ್ನಿಗೋಳಿಯ ಸ್ವರಾಂಜಲಿ ಸಹೋದರಿಯರಾದ ಶೋಭಿತಾ ಭಟ್ ಮತ್ತು ಆಶ್ವೀಜಾ ಉಡುಪ ಇವರ ಹಾಡುಗಾರಿಕೆಗೆ ಪುತ್ತೂರಿನ ತನ್ಮಯಿ ಉಪ್ಪಂಗಳ ವಯಲಿನ್ ಹಾಗೂ ಮೈಸೂರಿನ ಪ್ರಣವ್ ಸುಬ್ರಹ್ಮಣ್ಯ ಮೃದಂಗದಲ್ಲಿ ಸಾಥ್ ನೀಡಲಿರುವರು. ಇದೇ ಸಂದರ್ಭದಲ್ಲಿ ಶ್ರೀಮತಿ ಶ್ರುತಿ ಎಸ್. ಭಟ್ ಇವರಿಗೆ ‘ಯುವ ಕಲಾಮಣಿ 2023 ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಶ್ರೀಮತಿ ಶ್ರುತಿ ಎಸ್. ಭಟ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದ್ದು, ಚೆನ್ನೈಯ ಶ್ರೀಲಕ್ಷ್ಮೀ ಎಸ್. ಭಟ್ ವಯಲಿನ್, ಬೆಂಗಳೂರಿನ ಯುವ ಕಲಾಮಣಿ ನಿಕ್ಷಿತ ಪುತ್ತೂರು ಮೃದಂಗ ಹಾಗೂ ಪುತ್ತೂರಿನ ಬಾಲಕೃಷ್ಣ ಭಟ್ ಹೊಸಮನೆ ಮೋರ್ಸಿಂಗ್ ಸಾಥ್ ನೀಡಲಿರುವರು.
ದಿನಾಂಕ 18-02-2024ರಂದು ಬೆಳಿಗ್ಗೆ ಗಂಟೆ 6ಕ್ಕೆ ಸುರತ್ಕಲ್ಲಿನ ಫ್ಲೈ ಓವರ್ ಕೆಳಗೆ ನಡೆಯಲಿರುವ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಮತ್ತು ನಾಗರಿಕ ಸಲಹಾ ಸಮಿತಿ (ರಿ) ಸುರತ್ಕಲ್ ಆಶ್ರಯದಲ್ಲಿ 50ನೇ ಉದಯರಾಗ ಹಾಗೂ 26ನೇ ‘ಮಂಜುನಾದ’ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳನ್ನಾಧರಿಸಿದ ಸಂಗೀತ ಕಚೇರಿಯು ನಡೆಯಲಿದೆ. ಚೆನ್ನೈಯ ಶ್ರುತಿ ಎಸ್. ಭಟ್, ಸುರತ್ಕಲ್ಲಿನ ಯುವ ಕಲಾಮಣಿ ಶ್ರೇಯಾ ಕೊಳತಾಯ, ಕಿನ್ನಿಗೋಳಿಯ ಶೋಭಿತಾ ಭಟ್ ಮತ್ತು ಆಶ್ವೀಜಾ ಉಡುಪ ಇವರ ಹಾಡುಗಾರಿಕೆಗೆ ಪುತ್ತೂರಿನ ತನ್ಮಯಿ ಉಪ್ಪಂಗಳ ವಯಲಿನ್ ಹಾಗೂ ಅಚಿಂತ್ಯ ಕೃಷ್ಣ ಮೃದಂಗ ಸಾಥ್ ನೀಡಲಿರುವರು.