ಉಡುಪಿ: ರಾಗ ಧನ ಸಂಸ್ಥೆಯ ಆಶ್ರಯದಲ್ಲಿ ನಡೆದಿರುವ ಗೃಹ ಸಂಗೀತ ಕಾರ್ಯಕ್ರಮ ರಾಗರತ್ನಮಾಲಿಕೆ ಇದೇ ಜೂನ್ 17ರಂದು ಸಂಜೆ ಡಾ.ಕೃಷ್ಣಮೂರ್ತಿ ಅವರ ಆತಿಥ್ಯ ಹಾಗೂ ಸಹಪ್ರಾಯೋಜಕತ್ವದಲ್ಲಿ ವಿದುಷಿಯರಾದ ಕಾಂಚನ ಎಸ್. ಶ್ರೀರಂಜನಿ ಹಾಗೂ ಕಾಂಚನ ಎಸ್. ಶ್ರುತಿರಂಜನಿ ವಯೊಲಿನ್ ಪಕ್ಕವಾದ್ಯದಲ್ಲಿ ಶ್ರೀ ಶ್ರೀಜಿತ್ ತಿರುವನಂತಪುರ ಮೃದಂಗದಲ್ಲಿ ವಿದ್ವಾನ್ ಶ್ರೀ ಜಿ.ಯಸ್. ರಾಮಾನುಜನ್ ಮೈಸೂರು ಘಟಂನಲ್ಲಿ ಮೈಸೂರಿನ ಶ್ರೀ ಶರತ್ ಕೌಶಿಕ್ ಸಹಕರಿಸಿದ್ದಾರೆ. ಪೂರ್ವಭಾವಿಯಾಗಿ ಶ್ರೀಮತಿ ಹೇಮಲತಾ ರಾವ್ ಮತ್ತು ಅವರ ಶಿಷ್ಯೆಯರು, ವಯೊಲಿನ್ ಶ್ರೀ ವೈಭವ್ ಪೈ, ಮೃದಂಗದಲ್ಲಿ ಮಾಸ್ಟರ್ ಪ್ರಜ್ಞಾನ್ ಸಹಕರಿಸಿದರು.
ಈ ಸಂದರ್ಭದಲ್ಲಿ ಉಡುಪಿಯ ಹಿರಿಯ ಕೊಳಲು ವಿದ್ವಾಂಸರಾದ ಪ್ರೊ.ರಾಘವೇಂದ್ರ ರಾವ್ ಹಾಗೂ ಅವರ ಪತ್ನಿ ಶ್ರೀಮತಿ ಪ್ರೇಮಾ ಅವರನ್ನು ರಾಗ ಧನ ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.