ಕಾಸರಗೋಡು : ಕಾಸರಗೋಡಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ (ರಿ.) ಇದರ ಸಹ ಸಂಸ್ಥೆಗಳಲ್ಲಿ ಒಂದಾದ ‘ಸ್ವರ ಚಿನ್ನಾರಿ’ಯ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಏರ್ಪಡಿಸುತ್ತಿರುವ ‘ರಾಗಾಲಾಪ’ ರಾಗಸಂಯೋಜನಾ ಶಿಬಿರವು ದಿನಾಂಕ 14 ಡಿಸೆಂಬರ್ 2024ರಂದು ಕಾಸರಗೋಡಿನ ಕರಂದೆಕ್ಕಾಡಿನಲ್ಲಿರುವ ‘ಪದ್ಮಗಿರಿ ಕಲಾ ಕುಟೀರ’ದಲ್ಲಿ ನಡೆಯಲಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ವಿ. ಮನೋಹರ್ ಇವರು ಈ ಶಿಬಿರದ ನಿರ್ದೇಶಕರಾಗಿರುತ್ತಾರೆ. ಬೆಳಿಗ್ಗೆ 9-30 ಗಂಟೆಗೆ ಖ್ಯಾತ ನೇತ್ರ ತಜ್ಞರಾದ ಡಾ. ಅನಂತ್ ಕಾಮತ್ ಇವರು ಈ ಶಿಬಿರದ ಉದ್ಘಾಟನೆ ಮಾಡಲಿದ್ದು, ಖ್ಯಾತ ಕವಿ ಶ್ರೀಕೃಷ್ಣಯ್ಯ ಅನಂತಪುರ ಇವರು ಅಧ್ಯಕ್ಷತೆ ವಹಿಸಲಿರುವರು. ಖ್ಯಾತ ಅಂಕಣಕಾರರಾದ ಮೈಸೂರಿನ ಶ್ರೀ ರವೀಂದ್ರ ಜೋಶಿ ಇವರು ಸಮಾರೋಪ ಮಾತುಗಳನ್ನಾಡಲಿದ್ದಾರೆ.