ಬ್ರಹ್ಮಾವರ : ರಾಗ ಧನ ಉಡುಪಿ (ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸುತ್ತಿರುವ ‘ರಾಗರತ್ನಮಾಲಿಕೆ – 39’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 27 ಜುಲೈ 2025ರಂದು ಅಪರಾಹ್ನ 3-00 ಗಂಟೆಗೆ ಬ್ರಹ್ಮಾವರದ ಕುಂಜಾಲು ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ತಿಕ್ ಶ್ಯಾಮ್ ಮುಂಡೋಳುಮೂಲೆ ಮತ್ತು ವಿದುಷಿ ಧನ್ಯಾ ದಿನೇಶ್ ರುದ್ರಪಟ್ಣಂ ಇವರ ಹಾಡುಗಾರಿಕೆಗೆ ಪಕ್ಕವಾದ್ಯ – ವಯೊಲಿನ್ ನಲ್ಲಿ ಜನಾರ್ದನ ಎಸ್. ಬೆಂಗಳೂರು ಹಾಗೂ ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿರುತ್ತಾರೆ.