ಧಾರವಾಡ : ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ ಧಾರವಾಡದ 2024ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 20 ಏಪ್ರಿಲ್ 2025ನೇ ಭಾನುವಾರ ಬೆಳಗ್ಗೆ ಘಂಟೆ 10.00ಕ್ಕೆ ಧಾರವಾಡದ ಆರ್. ಎನ್. ಶೆಟ್ಟಿ ಕ್ರೀಡಾಂಗಣದ ಬಳಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ.
ಖ್ಯಾತ ಕಥೆಗಾರರು ಮತ್ತು ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ ಧಾರವಾಡ ಇದರ ಅಧ್ಯಕ್ಷರಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರೀ ಪ್ರಕಾಶ ಪುಟ್ಟಪ್ಪ ಇವರ ‘ಗಾಂಧಿ ಜೋಡಿನ ಮಳಿಗೆ’ ಕಥಾ ಸಂಕಲನಕ್ಕೆ ಮತ್ತು ಶ್ರೀ ಮಂಜುನಾಥ ಕುಣಿಗಲ್ ಇವರ ‘ದೂರ ದೇಶದ ದೇವರು’ ಕಥಾ ಸಂಕಲನಕ್ಕೆ ಧಾರವಾಡದ ಖ್ಯಾತ ಸಂಸ್ಕೃತ ವಿದ್ವಾಂಸರು ಮತ್ತು ಚಿಂತಕರಾದ ಡಾ. ಶ್ರೀರಾಮ ಭಟ್ಟ ಇವರು ‘ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ 2024’ ಪ್ರದಾನ ಮಾಡಲಿದ್ದಾರೆ. ಧಾರವಾಡದ ಖ್ಯಾತ ಕಥೆಗಾರರಾದ ಪ್ರೊ. ರಾಘವೇಂದ್ರ ಪಾಟೀಲ ಇವರು ಪ್ರಶಸ್ತಿ ಪುರಸ್ಕೃತ ಕಥಾ ಸಂಕಲನಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಖ್ಯಾತ ವಿಮರ್ಶಕರು ಮತ್ತು ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸಂಚಾಲಕರಾದ ಶ್ರೀ ವಿಕಾಸ ಹೊಸಮನಿ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಇದರ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ, ಖ್ಯಾತ ಉದ್ಯಮಿಗಳು ಹಾಗೂ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಮಹಾಪೋಷಕರಾದ ಬೆಂಗಳೂರಿನ ಡಾ. ಎಚ್. ಸಿ. ಪ್ರಭಾಕರ, ಖ್ಯಾತ ಕವಿ ಹಾಗೂ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ ಇದರ ಸದಸ್ಯರಾದ ಮೈಸೂರಿನ ಶ್ರೀಮತಿ ಮೀನಾ, ಖ್ಯಾತ ವಿಮರ್ಶಕರು ಹಾಗೂ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾದ ಕಾಸರಗೋಡಿನ ಡಾ. ಸುಭಾಷ ಪಟ್ಟಾಜೆ, ಖ್ಯಾತ ಕಾದಂಬರಿಕಾರರು ಹಾಗೂ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾದ ಬೆಂಗಳೂರಿನ ಶ್ರೀ ಎಂ. ಆರ್. ದತ್ತಾತ್ರಿ, ಖ್ಯಾತ ಲೇಖಕರು ಹಾಗೂ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾದ ಬೆಂಗಳೂರಿನ ಡಾ. ಸಂಕೇತ ಪಾಟೀಲ ಭಾಗವಹಿಸಲಿದ್ದಾರೆ.

