ಬೆಂಗಳೂರು : ರಂಗಸ್ಥಳ ಯಕ್ಷ ಮಿತ್ರ ಕೂಟ (ರಿ.) ಬೆಂಗಳೂರು ಇದರ ರಜತ ಪರ್ವ -2025 ಇದರ ಉದ್ಘಾಟನಾ ಸಮಾರಂಭ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿನಾಂಕ 19 ಜುಲೈ 2025ರಂದು ಮಧ್ಯಾಹ್ನ 3-00 ಗಂಟೆಗೆ ಬೆಂಗಳೂರಿನ ನಾಗರಬಾವಿಯಲ್ಲಿರುವ ಶ್ರೀ ವೇಣುಗೋಪಾಲಕೃಷ್ಣ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ಣಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ‘ನಡುತಿಟ್ಟಿನ ಹಾರಾಡಿ/ಮಟಪಾಡಿ ಶೈಲಿಗಳಲ್ಲಿನ ಸಾಮ್ಯತೆ, ಭಿನ್ನತೆ ಮತ್ತು ವೈಶಿಷ್ಟ್ಯತೆ’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ. ಸಂಜೆ 4-00 ಗಂಟೆಗೆ ಎಚ್. ಸುಜಯೀಂದ್ರ ಹಂದೆ ಮತ್ತು ತಂಡದವರಿಂದ ಹಾರಾಡಿ ಶೈಲಿ ಮತ್ತು ಮಟಪಾಡಿ ಶೈಲಿಯ ಪ್ರಾತ್ಯಕ್ಷಿಕೆ ಪ್ರಸ್ತುತಗೊಳ್ಳಲಿದೆ. ಸಂಜೆ 5-00 ಗಂಟೆಗೆ ವೃತ್ತಿ ಕಲಾವಿದರಿಂದ ‘ಮೀನಾಕ್ಷಿ ಕಲ್ಯಾಣ’ ಎಂಬ ಪ್ರಸಂಗ ನಡುತಿಟ್ಟಿನ ಶೈಲಿಯಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.