ಬಂಟ್ವಾಳ : ಕಲಾನಿಕೇತನ ಡಾನ್ಸ್ ಫೌಂಡೇಷನ್ ಕಲ್ಲಡ್ಕ ಇವರು ಪ್ರಸ್ತುತ ಪಡಿಸುವ ‘ರಜತ ಕಲಾ ಯಾನ’ ಸಂಭ್ರಮವನ್ನು ದಿನಾಂಕ 26 ಅಕ್ಟೋಬರ್ 2025ರಂದು ಬಂಟ್ವಾಳ ಬಿ.ಸಿ. ರೋಡ್ ಇಲ್ಲಿರುವ ಸ್ಪರ್ಶ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಚಕ್ರಪಾಣಿ ನೃತ್ಯ ಕಲಾ ಕೇಂದ್ರದ ಸುರೇಶ್ ಅತ್ತಾವರ ಮತ್ತು ಸ್ಮಿಥೇಶ್ ಎಸ್. ಬಾರ್ಯ ಇವರು ಭಾಗವಹಿಸಲಿದ್ದಾರೆ.
ವಿದುಷಿ ಅಮೃತ ಸಂದೀಪ್ ಆಚಾರ್ಯ, ವಿದುಷಿ ಹರ್ಷಿತಾ ಟಿ.ಪಿ., ವಿದುಷಿ ಪ್ರಜ್ಞಾ, ವಿದುಷಿ ರಾಜಶ್ರೀ ಅಭಿಷೇಕ್, ವಿದುಷಿ ಶ್ರೀದೇವಿ, ವಿದುಷಿ ಕೀರ್ತಿ ಪ್ರಭು ಕೆ., ವಿದುಷಿ ಪೂಜಾ ಪ್ರಶಾಂತ್ ಆಚಾರ್ಯ, ವಿದುಷಿ ಮಹಿಮಾ ಎಂ. ಪಣಿಕರ್, ವಿದುಷಿ ಪ್ರತೀಕ್ಷಾ ಕೆ. ಆಚಾರ್ಯ, ವಿದುಷಿ ದೀಪಾಲಿ, ವಿದುಷಿ ಶಾಶ್ವತ ತಾರನಾಥ್, ವಿದುಷಿ ಅನುರಾಧ ವೈ., ವಿದುಷಿ ಸೃಜನಾ ಕೆ.ಸಿ., ವಿದುಷಿ ಪ್ರಥ್ವಿ ಸಿ. ಗೌಡ, ವಿದುಷಿ ಹರಿಪ್ರಿಯಾ, ವಿದುಷಿ ಮೇಘಾ ಎನ್., ವಿದುಷಿ ಅನುಷಾ ರಾವ್, ವಿದುಷಿ ಚಂದನ ಕೊಪ್ಪಳ, ವಿದುಷಿ ಕೃತಿ ಆರ್., ವಿದುಷಿ ಅಂಜನಾ ಕೆ. ರಾವ್ ಇವರುಗಳು ನೃತ್ಯ ಪ್ರದರ್ಶನ ನೀಡಲಿದ್ದು, ನಟ್ಟುವಾಂಗದಲ್ಲಿ ವಿದುಷಿ ವಿದ್ಯಾ ಮನೋಜ್, ಹಾಡುಗಾರಿಕೆಯಲ್ಲಿ ವಿನೀತ್ ಪುರುವಂಕರ, ಗಿತೇಶ್ ಗೋಪಾಲಕೃಷ್ಣನ್ ನೀಲೇಶ್ವರಂ ಇವರು ಮೃದಂಗಂನಲ್ಲಿ ಹಾಗೂ ಎ.ಎಸ್. ಹರಿಪ್ರಸಾದ್ ನೀಲೇಶ್ವರಂ ಇವರು ಕೊಳಲಿನಲ್ಲಿ ಸಾಥ್ ನೀಡಲಿದ್ದಾರೆ.