ಸುರತ್ಕಲ್ : ಗೋವಿಂದ ದಾಸ ಕಾಲೇಜು, ಸೂರತ್ಕಲ್ ಇಲ್ಲಿನ ಕನ್ನಡ ವಿಭಾಗ ಸಾಹಿತ್ಯ ಸಂಘ ಹಾಗೂ ಲಯನ್ಸ್ ಕ್ಲಬ್ ಎಕ್ಕಾರು ಕಟೀಲ್ ಇವರ ಸಹಯೋಗದೊಂದಿಗೆ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮವು ದಿನಾಂಕ 01 ನವೆಂಬರ್ 2024 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಕೃಷ್ಣಮೂರ್ತಿ ಪಿ.ಮಾತನಾಡಿ “ಪ್ರಸ್ತುತ ಕನ್ನಡವನ್ನು ಬಳಕೆಯಲ್ಲಿ ಉಳಿಸುವ ಪ್ರಯತ್ನವನ್ನು ಪ್ರತಿಯೊಬ್ಬ ಕರ್ನಾಟಕದ ಪ್ರಜೆಯು ಮಾಡಬೇಕು. ವ್ಯವಹಾರದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಬಳಸಿ ಭಾಷಾಭಿಮಾನವನ್ನು ತೋರಬೇಕು ಹಾಗೂ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಕಾಯಕದಲ್ಲಿ ನಿರತರಾಗಬೇಕು.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಲೈನ್ಸ್ ಕ್ಲಬ್ ಎಕ್ಕಾರು ಕಟೀಲು ಇದರ ಅಧ್ಯಕ್ಷರಾದ ಲಯನ್ ಶೇಖರ ಶೆಟ್ಟಿ, ಲಯನ್ ಗಂಗಾಧರ ಅಮಿನ್, ಉಪ ಪ್ರಾಂಶುಪಾಲರಾದ ಪ್ರೊಫೆಸರ್ ನೀಲಪ್ಪ, ಆಂತರಿಕ ಗುಣಮಟ್ಟ ಖಾತರಿಕೋಶದ ನಿರ್ದೇಶಕರಾದ ಪ್ರೊಫೆಸರ್ ಹರೀಶ್ ಆಚಾರ್, ವಿದ್ಯಾರ್ಥಿ ಕ್ಷೇಮಪರಣಾಧಿಕಾರಿ ಡಾ. ಸೌಮ್ಯ ಪ್ರವೀಣ್, ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಗೀತಾ ವೇಣು, ಕನ್ನಡ ವಿಭಾಗದ ಡಾ. ಸಂತೋಷ್ ಆಳ್ವಾ ಹಾಗೂ ಅಕ್ಷತಾ ಶೆಟ್ಟಿ ಭಾಗವಹಿಸಿದರು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಯುವಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸಿಂಚನ ಸ್ವಾಗತಿಸಿ, ಅಕ್ಷತಾ ನಿರೂಪಿಸಿ, ಹಲೀಮ ಅಕೀಲಾ ಧನ್ಯವಾದ ಸಮರ್ಪಿಸಿದರು.
Subscribe to Updates
Get the latest creative news from FooBar about art, design and business.
Previous Articleಕಾಷ್ಪಶಿಲ್ಪಿ ಬಸಣ್ಣ ಕಾಳಪ್ಪ ಕಂಚಗಾರ ನಿಧನ
Related Posts
Comments are closed.