ಬಂಟ್ವಾಳ : ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ (ರಿ.) ಮುಡಿಪು ಇದರ ರಜತ ಸಂಭ್ರಮ ಪ್ರಯುಕ್ತ ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಇದರ ಸಹಭಾಗಿತ್ವದಲ್ಲಿ ‘ವಿಶ್ವಭಾರತಿ ರಜತ ವೈಭವ’ದ ಅಂಗವಾಗಿ ‘ರಾಮಾಯಣ ದಶಪರ್ವ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು 19 ಜುಲೈ 2024ರಂದು ಬಿ.ಸಿ.ರೋಡ್ ತುಳು ಶಿವಳ್ಳಿ ಸಭಾಭವನದಲ್ಲಿ ಚಾಲನೆಗೊಂಡಿತು.
ಈ ಕಾರ್ಯಕ್ರಮವನ್ನು ಯಕ್ಷದಶಾವತಾರಿ ಶ್ರೀ ಕೆ. ಗೋವಿಂದ ಭಟ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ತುಳು ಶಿವಳ್ಳಿ ಸಂಘ ಬಂಟ್ವಾಳ ಘಟಕ ಅಧ್ಯಕ್ಷರಾದ ಶ್ರೀ ರಾಜಾರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಜೀಪ ಮಾಗಣೆ ತಂತ್ರಿ ಶ್ರೀ ಎಂ. ಸುಬ್ರಮಣ್ಯ ಭಟ್, ಖ್ಯಾತ ಯಕ್ಷಗಾನ ಕಲಾವಿದ ವಿದ್ವಾಂಸ ಉಜಿರೆ ಅಶೋಕ ಭಟ್, ಶಂಕರ ಸೇವಾ ಪ್ರತಿಷ್ಠಾನ ಬಂಟ್ವಾಳ ಅಧ್ಯಕ್ಷರಾದ ಕೈಯೂರು ನಾರಾಯಣ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪ್ರಶಾಂತ ಹೊಳ್ಳ ನೇತೃತ್ವದಲ್ಲಿ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀರಾಮ ಪಟ್ಟಾಭಿಷೇಕ’ ಎಂಬ ಯಕ್ಷಗಾನ ತಾಳಮದ್ದಳೆ ಜರಗಿತು. ಕುಮಾರಿ ಶ್ರೀವಿದ್ಯಾ ಐತಾಳ್, ಪ್ರಶಾಂತ ಕುಮಾರ್ ಗಟ್ಟಿ, ಕುದುರೆ ಕೊಡ್ಲು ರಾಮಮೂರ್ತಿ, ರಾಮದಾಸ್ ವಗೆನಾಡು, ರಾಮ ಹೊಳ್ಳ ಸುರತ್ಕಲ್, ಎಸ್.ಅಶೋಕ್ ಭಟ್, ಉ. ಸುಬ್ರಾಯ ಹೊಳ್ಳ, ನಾ. ಕಾರಂತ ಪೆರಾಜೆ, ಕೊಯಿಲ ಮೋಹನ್ ರಾವ್ ಮತ್ತು ಶ್ರೀಮತಿ ಸುಮಂಗಲಾ ರತ್ನಾಕರ ರಾವ್ ಕಲಾವಿದರಾಗಿ ಭಾಗವಹಿಸಿದರು.