ಬದಿಯಡ್ಕ : ರಾಮಾಯಣ ವಾರಚರಣೆ ಸಮಿತಿ ಬದಿಯಡ್ಕ ಇದರ ನೇತೃತ್ವದಲ್ಲಿ ಕಳೆದ ಏಳು ವರ್ಷಗಳಿಂದ ನಡೆಸಿಕೊಂಡು ಬಂದಂತೆ ಬದಿಯಡ್ಕ ನವ ಜೀವನ ವಿದ್ಯಾಲಯದ ಸಮೀಪದಲ್ಲಿರುವ ಶ್ರೀ ರಾಮಲೀಲಾ ಯೋಗ ಶಿಕ್ಷಣ ಕೇಂದ್ರದಲ್ಲಿ ರಾಮಾಯಣ ವಾರಾಚರಣೆ ಕಾರ್ಯಕ್ರಮವು ದಿನಾಂಕ 16-07-2023ರಂದು ಉದ್ಘಾಟನೆಗೊಂಡು ದಿನಾಂಕ 17-07-2023 ಮತ್ತು ದಿನಾಂಕ 23-07-2023ರಂದು ಕಾರ್ಯಕ್ರಮಗಳು ನಡೆದವು.
ರಾಮಾಯಣ ವಾರಚರಣೆಯ ಆಗಸ್ಟ್ ತಿಂಗಳ ಕಾರ್ಯಕ್ರಮವು ದಿನಾಂಕ 06-08-2023, 12-08-2023, 13-08-2023 ಮತ್ತು 15-08-2023ರಂದು ನಡೆಯಲಿದ್ದು, ಈ ಸಂದರ್ಭ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ 06-08-2023ರಂದು ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ವೈದ್ಯರು ಧಾರ್ಮಿಕ ಮುಖಂಡರಾದ ಡಾ. ಶ್ರೀನಿಧಿ ಸರಳಾಯ ವಹಿಸಲಿದ್ದು, ಸಾಹಿತಿ ಶ್ರೀಮತಿ ಶಾರದಾ ಕಾಡಮನೆ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಖ್ಯಾತ ವೈದ್ಯರು ಧಾರ್ಮಿಕ ಮುಖಂಡರಾದ ಡಾ. ವಿಷ್ಣು ಪ್ರಕಾಶ್ ಬರೆಕರೆ ಇವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಬದಿಯಡ್ಕದ ಸುನಾದ ಸಂಗೀತ ಕಲಾ ಶಾಲೆ ಇವರಿಂದ ಸುನಾದ ‘ಯುವ ಭಾರತಿ ಕಾರ್ಯಕ್ರಮ’ ನಡೆಯಲಿದೆ.
ದಿನಾಂಕ 12-08-2023ರಂದು ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶ್ರೀಶಕುಮಾರ್ ಪಂಜಿತ್ತಡ್ಕ ವಹಿಸಲಿದ್ದು, ಶ್ರೀಮತಿ ವಸುಧಾ ಗೋಪಿನಾಥ್ ಶೆಣೈ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಧಾರ್ಮಿಕ ಮುಖಂಡರಾದ ಶ್ರೀ ಮಂಜುನಾಥ್ ಮಾನ್ಯ ಇವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ ಮತ್ತು ಶ್ರೀಮತಿ ರೂಪಾ ಕನಕ್ಕಪ್ಪಾಡಿ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 13-08-2023ರಂದು ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಯುತ ಪಿಲಿಂಗಲ್ಲು ಕೃಷ್ಣ ಭಟ್ ವಹಿಸಲಿದ್ದು, ಪುತ್ತೂರು ವೈಷ್ಣವಿ ನಾಟ್ಯಾಲಯದ ನೃತ್ಯ ಶಿಕ್ಷಕಿ ವಿದುಷಿ ಶ್ರೀಮತಿ ಯೋಗೀಶ್ವರಿ ಜಯಪ್ರಕಾಶ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಧಾರ್ಮಿಕ ಮುಖಂಡರಾದ ಶ್ರೀಯುತ ವಸಂತ ಪೈ ಇವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ನಂತರ ನೃತ್ಯ ಸೌರಭ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 15-08-2023ರಂದು ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಶ್ರೀ ರಂಗ ಶರ್ಮ ಉಪ್ಪಂಗಳ ಇವರು ವಹಿಸಲಿದ್ದು, ಶ್ರೀಮತಿ ಪ್ರಶಾಂತಿ ಮೋಹನ್ ಪ್ರಕಾಶ್ ಕರಿಂಬಿಲ ದೀಪ ಪ್ರಜ್ವಲನೆ ಮಾಡಲಿದ್ದಾರೆ ಮತ್ತು ನೃತ್ಯ ಶಿಕ್ಷಕಿ ಶ್ರೀಮತಿ ಅನುಪಮ ರಾಘವೇಂದ್ರ ಇವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಊರಪರವೂರ ಕಲಾವಿದರಿಂದ ‘ರಾವಣ ವಧೆ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ವಾರಾಚರಣೆಯ ಸಭಾ ಕಾರ್ಯಕ್ರಮದಲ್ಲಿ ‘ರಾಮ ತಾರಕ ಮಂತ್ರ’ ಯೋಗ ಗುರು ಸೂರ್ಯನಾರಾಯಣ ವಳಮಲೆ ಇವರಿಂದ ಜಪಯಜ್ಞ ನಡೆಯಲಿರುವುದು.