ಮಂಗಳೂರು: ‘ರಂಗ ಚಾವಡಿ’ ಮಂಗಳೂರು ಸಾಹಿತ್ಯಕ ಸಾಂಸ್ಕೃ ತಿಕ ಸಂಘಟನೆ ಮತ್ತು ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಶನ್ ಸುರತ್ಕಲ್ ಆಶ್ರಯದಲ್ಲಿ ರಂಗು ರಂಗಿನ ರಂಗೋತ್ಸವ, ರಂಗಚಾವಡಿ ಬೆಳ್ಳಿಹಬ್ಬದ ಸಂಭ್ರಮ ದಿನಾಂಕ 09 ನವೆಂಬರ್ 2025ರಂದು ಸಂಜೆ ಘಂಟೆ 4.30ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಸಮಾರಂಭದಲ್ಲಿ 2025ರ ಸಾಲಿನ ರಂಗಚಾವಡಿ ಪ್ರಶಸ್ತಿಗೆ ಆಯ್ಕೆಯಾಗಿರುವ ಕುಸೇಲ್ದರಸೆ ನವೀನ್ ಡಿ. ಪಡೀಲ್ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಿ. ಕೆ. ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ. ಅಜಿತ್‌ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಪ್ರಮುಖರಾದ ಡಾ. ಸಂಜೀವ ದಂಡೆಕೇರಿ, ಅನಿಲ್ ಶೆಟ್ಟಿ ತೇವು ಸೂರಿಂಜೆ, ಗಿರೀಶ್ ಎಂ. ಶೆಟ್ಟಿ ಕಟೀಲು, ಕಿಶೋರ್ ಡಿ. ಶೆಟ್ಟಿ, ಭವಾನಿ ಶಂಕರ್ ಡಿ. ಶೆಟ್ಟಿ, ಚಂದ್ರಶೇಖರ ಮಾಡ ಕುದ್ರಾಡಿಗುತ್ತು, ವೇಣುಗೋಪಾಲ್ ಶೆಟ್ಟಿ, ಪ್ರಕಾಶ್ ಪಾಂಡೇಶ್ವರ್, ಲಂಚುಲಾಲ್ ಕೆ. ಎಸ್., ಶೋಧನ್ ಶೆಟ್ಟಿ, ಅಶೋಕ್ ಶೆಟ್ಟಿ ತಡಂಬೈಲ್, ಈಶ್ವರ್ ಪ್ರಸಾದ್ ಶೆಟ್ಟಿ ಹಾಗೂ ರಮೇಶ್ ಶೆಟ್ಟಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ರವೀಂದ್ರ ಪ್ರಭು ತಂಡದಿಂದ ‘ರಾಗ್ ರಂಗ್’ ಸಂಗೀತ ರಸಂಜರಿ, ಅರವಿಂದ ಬೋಳಾರ್, ಉಮೇಶ್ ಮಿಜಾರ್ ಅವರಿಂದ ‘ಕಲಿವಲಿ ಕಾಮಿಡಿ’, ಪುಷ್ಪರಾಜ್ ಬೊಳ್ಳಾರ್, ರವಿ ರಾಮಕುಂಜ, ರಾಘವೇಂದ್ರ ರೈ ತಂಡದಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.
Subscribe to Updates
Get the latest creative news from FooBar about art, design and business.
