ಕಲಬುರಗಿ : ಕರ್ನಾಟಕ ರಂಗಾಯಣ ಕಲಬುರಗಿ ಇದರ ವತಿಯಿಂದ ‘ರಂಗ ದಸರಾ’ ಮೂರು ದಿನಗಳ ನಾಟಕೋತ್ಸವವನ್ನು ದಿನಾಂಕ 27, 28 ಮತ್ತು 29 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 27 ಸೆಪ್ಟೆಂಬರ್ 2025ರಂದು ಈ ನಾಟಕೋತ್ಸವವನ್ನು ಮಾನ್ಯ ಜಿಲ್ಲಾಧಿಕಾರಿ ಕು. ಬಿ. ಫೌಜಿಯಾ ತರನ್ನುಮ್ ಇವರು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ರಂಗಾಯಣ ಕಲಬುರಗಿ ಇದರ ನಿರ್ದೇಶಕರಾದ ಡಾ. ಸುಜಾತಾ ಜಂಗಮಶೆಟ್ಟಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಜಯನಗರ ಜಿಲ್ಲೆಯ ಹನುಮಯ್ಯ ಕಲಾ ತಂಡ ಇವರಿಂದ ರಂಗಗೀತೆಗಳು ಮತ್ತು ಕಲಬುರಗಿಯ ವಿಶ್ವರಂಗ (ರಿ.) ತಂಡದವರಿಂದ ಡಾ. ವಿಶ್ವರಾಜ ಪಟೇಲ್ ಇವರ ನಿರ್ದೇಶನದಲ್ಲಿ ‘ಭರ್ಜರಿ ಭಾಗ್ಯ’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 28 ಸೆಪ್ಟೆಂಬರ್ 2025ರಂದು ಮರಿಯಮ್ಮನಹಳ್ಳಿ ರಂಗ ಬಿಂಬ (ರಿ.) ತಂಡದವರಿಂದ ಬಿ.ಎಂ.ಎಸ್. ಪ್ರಭು ಇವರ ನಿರ್ದೇಶನದಲ್ಲಿ ‘ಸಂಗ್ಯಾ ಬಾಳ್ಯ’ ನಾಟಕ ಪ್ರಸ್ತುತಗೊಳ್ಳಲಿದೆ.
ದಿನಾಂಕ 29 ಸೆಪ್ಟೆಂಬರ್ 2025ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಂಗಾಯಣ ಕಲಬುರಗಿ ಇದರ ನಿರ್ದೇಶಕರಾದ ಡಾ. ಸುಜಾತಾ ಜಂಗಮಶೆಟ್ಟಿ ಇವರು ವಹಿಸಲಿದ್ದು, ಸನ್ಮಾನ್ಯ ಎಂ.ವೈ. ಪಾಟೀಲ ಇವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಕಲಬುರಗಿ ಜಿಲ್ಲೆಯ ಅಫಜಲಪುರದ ಶ್ರೀ ಸಿದ್ಧರಾಮೇಶ್ವರ ಹವ್ಯಾಸಿ ಬೈಲಾಟ ಮಂಡಳಿ ಪ್ರಸ್ತುತಪಡಿಸುವ ‘ಭೀಮವಿಲಾಸ ಅರ್ಥಾತ್ ಕೀಚಕ ವಧೆ’ ಬಯಲಾಟ ಪ್ರದರ್ಶನಗೊಳ್ಳಲಿದೆ.