ಬೆಳಗಾವಿ : ರಂಗ ಸಂಪದ (ರಿ.) ಬೆಳಗಾವಿ ಇದರ ವತಿಯಿಂದ ‘ರಂಗ ಸಂಕ್ರಮಣ ನಾಟಕೋತ್ಸವ’ವನ್ನು ದಿನಾಂಕ 11 ಜನವರಿ 2025ರಿಂದ 14 ಜನವರಿ 2025ರವರೆಗೆ ಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ.
ದಿನಾಂಕ 11 ಜನವರಿ 2025ರಂದು ಧಾರವಾಡದ ‘ಅಭಿನಯ ಭಾರತಿ’ ತಂಡದ ಏಕವ್ಯಕ್ತಿ ಪ್ರದರ್ಶನ ಶ್ರೀಪತಿ ಮಂಜನಬೈಲು ನಿರ್ದೇಶನದಲ್ಲಿ ‘ಉರಿಯ ಉಯ್ಯಾಲೆ’ ನಾಟಕವನ್ನು ಜ್ಯೋತಿ ದೀಕ್ಷಿತ ಪುರಾಣಿಕ ಇವರು ಪ್ರಸ್ತುತ ಪಡಿಸಲಿದ್ದಾರೆ.
ದಿನಾಂಕ 12 ಜನವರಿ 2025ರಂದು ಬೆಳಗಾವಿಯ ‘ರಂಗಸಂಪದ’ ತಂಡದಿಂದ ವೈಭವ ಲೋಕೂರ ಇವರ ನಿರ್ದೇಶನದಲ್ಲಿ ‘ಡಿಯರ್ ಅಜ್ಜೋ’ ಎಂಬ ನಾಟಕವನ್ನು ಅರವಿಂದ ಕುಲಕರ್ಣಿ ಮತ್ತು ಸ್ನೇಹ ಕುಲಕರ್ಣಿ ಇವರುಗಳು ಅಭಿನಯಿಸಲಿದ್ದಾರೆ.
ದಿನಾಂಕ 13 ಜನವರಿ 2025ರಂದು ಮಳವಳ್ಳಿಯ ‘ರಂಗಬಂಡಿ’ ತಂಡದ ಏಕವ್ಯಕ್ತಿ ಪ್ರದರ್ಶನ ಮಧು ಮಳವಳ್ಳಿ ಇವರ ನಿರ್ದೇಶನದಲ್ಲಿ ‘ಮಧುರ ಮಂಡೋಡರಿ’ ನಾಟಕವನ್ನು ವನೀತಾ ರಾಜೇಶ ಇವರು ಪ್ರಸ್ತುತ ಪಡಿಸಲಿದ್ದಾರೆ.
ದಿನಾಂಕ 14 ಜನವರಿ 2025ರಂದು ಧಾರವಾಡದ ಆಟಮಾಟ ತಂಡದವರು ಮಹಾದೇವ ಹಡಪದ ಇವರ ನಿರ್ದೇಶನದಲ್ಲಿ ಬಸವರಾಜ ರಾಜಗುರು ಅವರ ಬದುಕಿನ ವೃತ್ತಾಂತದ ಸಂಗೀತ ನಾಟಕ ಏಕವ್ಯಕ್ತಿ ಪ್ರದರ್ಶನ ‘ನಾ ರಾಜಗುರು’ ನಾಟಕವನ್ನು ವಿಶ್ವರಾಜ ರಾಜಗುರು ಇವರು ಪ್ರದರ್ಶನ ನೀಡಲಿದ್ದಾರೆ.