ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷ ರಂಗಾಯಣ ಕಾರ್ಕಳ, ರಂಗಭೂಮಿ (ರಿ.) ಉಡುಪಿ ಹಾಗೂ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇವುಗಳ ಸಂಯುಕ್ತ ಸಂಯೋಜನೆಯಲ್ಲಿ ‘ರಂಗಭಾಷೆ’ ಕಾಲೇಜು ವಿದ್ಯಾರ್ಥಿಗಳಿಗಾಗಿ ರಂಗ ಕಾರ್ಯಾಗಾರ ಮತ್ತು ಕಿರು ನಾಟಕಗಳ ಉತ್ಸವವನ್ನು ದಿನಾಂಕ 16 ನವೆಂಬರ್ 2024ರಿಂದ 18 ನವೆಂಬರ್ 2024ರವರೆಗೆ ಉಡುಪಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 16 ನವೆಂಬರ್ 2024ರಂದು ಬೆಳಿಗ್ಗೆ 11-00 ಗಂಟೆಗೆ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಉಡುಪಿ ರಂಗಭೂಮಿ (ರಿ.) ಇದರ ಗೌರವಾಧ್ಯಕ್ಷರು ಮತ್ತು ಮಾಹೆಯ ಸಹ ಕುಲಾಧಿಪತಿಗಳಾದ ಡಾ. ಹೆಚ್.ಎಸ್. ಬಲ್ಲಾಳ್ ಇವರು ಅಧ್ಯಕ್ಷತೆ ವಹಿಸಲಿರುವರು. ಪ್ರಸಿದ್ಧ ರಂಗ ನಿರ್ದೇಶಕರಾದ ಶ್ರೀ ಪ್ರಸನ್ನ ಇವರು ಉದ್ಘಾಟನೆ ಮತ್ತು ಆಶಯ ಭಾಷಣ ಮಾಡಲಿರುವರು. ‘ರಂಗಾಟಗಳು ಮತ್ತು ಪರಿಚಯ’ – ಡಾ. ಶ್ರೀಪಾದ ಭಟ್, ಶ್ವೇತಾ ರಾಣಿ ಹೆಚ್. ಕೆ., ವಿನೀತ್ ಕುಮಾರ್, ‘ರಂಗಭೂಮಿ ಮಾಧ್ಯಮ ಮತ್ತು ಅದರ ಪ್ರಯೋಜನ’ – ಮಂಡ್ಯ ರಮೇಶ್, ‘ರಂಗ ಚಟುವಟಿಕೆ’ – ಡಾ. ಶ್ರೀಪಾದ ಭಟ್, ಶ್ವೇತಾ ರಾಣಿ ಹೆಚ್. ಕೆ., ವಿನೀತ್ ಕುಮಾರ್, ‘ನಾಟಕ –ಏನು ? ಯಾಕೆ ?’ ಡಾ. ಶ್ರೀಪಾದ ಭಟ್ ಇವರುಗಳು ನಡೆಸಿಕೊಡಲಿದ್ದಾರೆ. ಬಳಿಕ ವಿನೀತ್ ಕುಮಾರ್ ಇವರ ನಿರ್ದೇಶನದಲ್ಲಿ ಅಭಿನಯ ದರ್ಪಣ ಚಿಕ್ಕಮಗಳೂರು ತಂಡದಿಂದ ‘ಮುಸ್ಸಂಜೆಯಲ್ಲಿ ನಡೆದ ಘಟನೆ’ ನಾಟಕ ಪ್ರದರ್ಶನ ಹಾಗೂ ನಾಟಕದ ಕುರಿತು ಚರ್ಚೆ ನಡೆಯಲಿದೆ.
ದಿನಾಂಕ 17 ನವೆಂಬರ್ 2024ರಂದು ಬೆಳಿಗ್ಗೆ 9-30 ಗಂಟೆಗೆ ‘ಕನ್ನಡ ರಂಗಭೂಮಿ ಹಾಗೂ ಬಿ.ವಿ. ಕಾರಂತರು’ – ಚಲನಚಿತ್ರ ನಿರ್ದೇಶಕರಾದ ಟಿ.ಎಸ್. ನಾಗಾಭರಣ, ‘ರಂಗಭೂಮಿ ಮತ್ತು ಶಿಕ್ಷಣ’ ಬೆಂಗಳೂರಿನ ರಂಗತಜ್ಞರಾದ ಶಶಿಧರ ಭಾರಿಘಾಟ್ ಇವರು ಮಾತನಾಡಲಿದ್ದಾರೆ. ಮಧ್ಯಾಹ್ನ 12-15 ಗಂಟೆಗೆ ನಿಧಿ ಎಸ್. ಶಾಸ್ತ್ರಿ ಇವರ ರಚನೆ, ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಕಿನ್ನರ ಮೇಳ ತುಮರಿ ತಂಡದವರು ‘ಇರುವೆ ಪುರಾಣ’ ನಾಟಕ ಪ್ರದರ್ಶನ ನೀಡಲಿದ್ದಾರೆ. ಅಪರಾಹ್ನ 2-30 ಗಂಟೆಗೆ ಹಿರಿಯ ರಂಗಕರ್ಮಿ ಕೆ.ಜಿ. ಕೃಷ್ಣಮೂರ್ತಿ ಇವರು ‘ನಾಟಕ ಮತ್ತು ಮಕ್ಕಳ ರಂಗಭೂಮಿ’ ಹಾಗೂ ಡಾ. ಶ್ರೀಪಾದ ಭಟ್, ಶ್ವೇತಾ ರಾಣಿ ಹೆಚ್. ಕೆ., ವಿನೀತ್ ಕುಮಾರ್ ಇವರು ‘ರಂಗ ಚಟುವಟಿಕೆ’ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಂಜೆ 6-30 ಗಂಟೆಗೆ ನೀನಾಸಂ ರಂಗ ಶಿಕ್ಷಕರು ಮಂಜು ಕೊಡಗು ಇವರ ನಿರ್ದೇಶನದಲ್ಲಿ ಕುವೆಂಪು ರಚಿತ ‘ರಾಮಾಯಣ ದರ್ಶನಂ’ ಆಧಾರಿತ ‘ದಶಾನನ ಸ್ವಪ್ನ ಸಿದ್ಧಿ’ ನಾಟಕವನ್ನು ಭಳಿರೆ ವಿಚಿತ್ರಂ ತಂಡದವರು ಪ್ರದರ್ಶಿಸಿಸಲಿದ್ದು, ಬಳಿಕ ನಾಟಕ ಚರ್ಚೆ ನಡೆಯಲಿದೆ.
ದಿನಾಂಕ 18 ನವೆಂಬರ್ 2024ರಂದು ಬೆಳಿಗ್ಗೆ 9-30 ಗಂಟೆಗೆ ಕಿರುತೆರೆ ಹಾಗೂ ಸಿನಿಮಾ ನಟರಾದ ಸಿಹಿಕಹಿ ಚಂದ್ರು ‘ನಾಟಕದ ಮಾತು ಮತ್ತು ಸ್ಮರಣಾಶಕ್ತಿ’ ಹಾಗೂ ಬಿ.ಆರ್. ವೆಂಕಟರಮಣ ಐತಾಳ ಇವರು ‘ನಾಟಕ ಸಾಹಿತ್ಯ ಮತ್ತು ರಂಗಭೂಮಿ’ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ. ಅಪರಾಹ್ನ 2-30 ಗಂಟೆಗೆ ಒಡನಾಟ ತಂಡದಿಂದ ‘ಆನೆ ಡಾಕ್ಟರ್’ ಎಂಬ ನಾಟಕ ಪ್ರದರ್ಶನ ಹಾಗೂ ನಾಟಕದ ಕುರಿತು ಚರ್ಚೆಯ ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ.