ಮೈಸೂರು : ನಟನ ರಂಗಶಾಲೆ ವತಿಯಿಂದ ಒಂದು ವರ್ಷದ ಅಭಿನಯ ಮತ್ತು ರಂಗ ತರಬೇತಿಯ ‘ರಂಗಭೂಮಿ ಡಿಪ್ಲೊಮಾ 2024-25’ ತರಗತಿಯು ಪ್ರತಿದಿನ ಸಂಜೆ ಗಂಟೆ 5-30ರಿಂದ ರಾತ್ರಿ ಗಂಟೆ 9-00ರವರೆಗೆ ನಡೆಯಲಿದೆ.
16ರಿಂದ 30 ವರ್ಷ ವಯೋಮಿತಿಯ ಅರ್ಹ ಅಭ್ಯರ್ಥಿಗಳು ನಟನ ರಂಗಶಾಲೆಯ ಕಛೇರಿಯಲ್ಲಿ ಅಥವಾ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ನಿಗದಿತ ಅರ್ಜಿ ಶುಲ್ಕದೊಂದಿಗೆ ನೇರವಾಗಿ ಅಥವಾ ಅಂಚೆಯ ಮುಖಾಂತರ ಕಛೇರಿಗೆ ತಲುಪಿಸತಕ್ಕದ್ದು. ಆಯ್ಕೆ ಪ್ರಕ್ರಿಯೆಯು ನೇರ ಸಂದರ್ಶನದ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳು ಸಂದರ್ಶನದಲ್ಲಿ ಕಡ್ಡಾಯವಾಗಿ ಭಾಗವಹಿಸತಕ್ಕದ್ದು. ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ (ಆಡಿಷನ್)ವು ನಟನ ರಂಗಶಾಲೆಯಲ್ಲಿ ದಿನಾಂಕ 19-05-2024ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 01ರವರೆಗೆ ನಡೆಯಲಿದೆ.
ವೆಬ್ಸೈಟ್ : www.natanamysuru.org
ವಿಳಾಸ: ನಟನ ರಂಗಶಾಲೆ, ರಾಮಕೃಷ್ಣ ನಗರ ‘ಕೆ’ ಬ್ಲಾಕ್, ಮೈಸೂರು -570022
ಪ್ರವೇಶ ಶುಲ್ಕ ಮತ್ತು ಇತರ ಮಾಹಿತಿಗಳಿಗಾಗಿ ಸಂಪರ್ಕಿಸಿ : 7259537777, 9480468327