ಸುರತ್ಕಲ್ : ಸಾಹಿತ್ಯ, ಸಾಂಸ್ಕೃತಿಕ ಸಂಘಟನೆ ರಂಗಚಾವಡಿ ಮಂಗಳೂರು ಆಶ್ರಯದಲ್ಲಿ ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ.) ಸುರತ್ಕಲ್ ಇದರ ಸಹಯೋಗದಲ್ಲಿ ‘ರಂಗಚಾವಡಿ ವರ್ಷದ ಹಬ್ಬ’ ಕಾರ್ಯಕ್ರಮವು ದಿನಾಂಕ 10 ನವೆಂಬರ್ 2024ರಂದು ಸಂಜೆ 4-30 ಗಂಟೆಗೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ.
ಮುಂಬೈ ವಿ.ಕೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಮುಂಬೈನ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಚಲನಚಿತ್ರ ನಿರ್ಮಾಪಕ ಡಾ. ಸಂಜೀವ ದಂಡೆಕೇರಿ, ಶ್ರೀಡೆವಲಪರ್ಸ್ ಕಟೀಲು ಸಂಸ್ಥೆಯ ಮಾಲೀಕ ಗಿರೀಶ್ ಎಂ. ಶೆಟ್ಟಿ ಕಟೀಲು, ಚಲನಚಿತ್ರ ನಿರ್ಮಾಪಕ ಚಂದ್ರಶೇಖರ ಮಾಡ ಕುದ್ರಾಡಿಗುತ್ತು, ಥಾಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಲಕುಮಿ ತಂಡದ ವ್ಯವಸ್ಥಾಪಕ ಕಿಶೋರ್ ಡಿ. ಶೆಟ್ಟಿ ಇವರಿಗೆ 2024ನೇ ಸಾಲಿನ ‘ರಂಗಚಾವಡಿ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಕದ್ರಿ ನವನೀತ ಶೆಟ್ಟಿ ರಚನೆಯ ಜೀವನ್ ಉಳ್ಳಾಲ್ ಇವರ ನಿರ್ದೇಶನದಲ್ಲಿ ಶ್ರೀಲಲಿತೆ ಕಲಾವಿದರಿಂದ ‘ಶನಿ ಮಹಾತ್ಮೆ’ ತುಳು ಪೌರಾಣಿಕ ನಾಟಕ ಪ್ರದರ್ಶನ ಮತ್ತು ವಿಶೇಷ ಆಕರ್ಷಣೆಯಾಗಿ ‘ಗಾನ ಲಹರಿ’ ನಡೆಯಲಿದೆ.