ಬೆಂಗಳೂರು : ರಂಗ ಶಂಕರ ಇದರ ವತಿಯಿಂದ ಕನ್ನಡ ನಾಟಕೋತ್ಸವ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಚಾಮರಾಜನಗರದ ಶಾಂತಲಾ ಕಲಾವಿದರು ಇವರ ಸಹಯೋಗದೊಂದಿಗೆ ‘ರಂಗಕಲಿಕೆ ಕಾರ್ಯಾಗಾರ’ವನ್ನು ದಿನಾಂಕ 04 ಜನವರಿ 2024ರಿಂದ 08 ಜನವರಿ 2024ರವರೆಗೆ ಚಾಮರಾಜನಗರದ ಜೆ.ಎಸ್.ಎಸ್. ಮಹಿಳಾ ಕಾಲೇಜು ಸಭಾಂಗಣದಲ್ಲಿ ಪ್ರತಿ ದಿನ ಬೆಳಿಗ್ಗೆ 10-00ರಿಂದ ಸಂಜೆ 5-00 ಗಂಟೆ ತನಕ ಹಮ್ಮಿಕೊಳ್ಳಲಾಗಿದೆ.
ದಿನಾಂಕ 04 ಜನವರಿ 2024ರಂದು ದು ಸರಸ್ವತಿ ಇವರಿಂದ ‘ಏಕವ್ಯಕ್ತಿ ಪ್ರದರ್ಶನ ಕಟ್ಟಿಕೊಳ್ಳುವ ಬಗೆ’, ದಿನಾಂಕ 05 ಜನವರಿ 2024ರಂದು ಕೆ.ವೈ. ನಾರಾಯಣ ಸ್ವಾಮಿ ಇವರಿಂದ ‘ನಾಟಕ ರಚನೆಯ ಸೂಕ್ಷ್ಮಗಳು’, ದಿನಾಂಕ 06 ಜನವರಿ 2024ರಂದು ಪಿಚ್ಚಳ್ಳಿ ಶ್ರೀನಿವಾಸ ಇವರಿಂದ ‘ರಂಗ ಸಂಗೀತ ಎಂದರೇನು..’, ದಿನಾಂಕ 07 ಜನವರಿ 2024ರಂದು ಕೃಷ್ಣಮೂರ್ತಿ ಹನೂರು ಇವರಿಂದ ‘ಜನಪದ ಸಾಹಿತ್ಯದಲ್ಲಿ ನಾಟಕೀಯತೆ’ ಮತ್ತು ದಿನಾಂಕ 08 ಜನವರಿ 2024ರಂದು ಎಂ.ಎಸ್. ಆಶಾದೇವಿ ಇವರಿಂದ ‘ಸಾಹಿತ್ಯವಾಗಿ ನಾಟಕವನ್ನು ಓದಿಕೊಳ್ಳುವುದು’ ಎಂಬ ವಿಷಯದ ಬಗ್ಗೆ ಕಾರ್ಯಾಗಾರ ನಡೆಯಲಿದೆ.
ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ವಿವರಗಳಿಗಾಗಿ 8105404323 ಮತ್ತು [email protected] ನ್ನು ಸಂಪರ್ಕಿಸಿರಿ.