ಬೈಂದೂರು : ಲಾವಣ್ಯ (ರಿ.) ಬೈಂದೂರು ಇದರ 48ನೇ ವಾರ್ಷಿಕೋತ್ಸವ ಹಾಗೂ ದಿ. ಕೆ. ಲಕ್ಷ್ಮೀ ನಾರಾಯಣ ಸ್ಮರಣಾರ್ಥ ‘ರಂಗಪಂಚಮಿ 2025’ ರಂಗೋತ್ಸವ ಕಾರ್ಯಕ್ರಮವನ್ನು ದಿನಾಂಕ 01ರಿಂದ 05 ಮಾರ್ಚ್ 2025ರಂದು ಸಂಜೆ ಗಂಟೆ 6-30ಕ್ಕೆ ಬೈಂದೂರಿನ ಶ್ರೀ ಶಾರದಾ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 01 ಮಾರ್ಚ್ 2025ರಂದು ಲಾವಣ್ಯ (ರಿ.) ಬೈಂದೂರು ಇದರ ಅಧ್ಯಕ್ಷರಾದ ನರಸಿಂಹ ಬಿ. ನಾಯಕ್ ಇವರ ಅಧ್ಯಕ್ಷತೆಯಲ್ಲಿ ಧಾರವಾಡದ ಉದ್ಯಮಿ ಯು.ಬಿ. ಶೆಟ್ಟಿ ಇವರು ರಂಗೋತ್ಸವದ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದ ಗೋವಿಂದ ಎಂ. ಮತ್ತು ಸಂಗೀತ ಕಲಾವಿದ ಕೃಷ್ಣ ಕಾಮತ್ ಹಾಲಾಡಿ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಲಾವಣ್ಯ (ರಿ.) ಬೈಂದೂರು ಇವರು ಬಿ. ಗಣೇಶ ಕಾರಂತ ಇವರ ನಿರ್ದೇಶನದಲ್ಲಿ ‘ಆಲಿಬಾಬಾ ಮತ್ತು 40 ಕಳ್ಳರು’ ನಾಟಕ ಪ್ರದರ್ಶನ ನೀಡಲಿದ್ದಾರೆ.
ದಿನಾಂಕ 02 ಮಾರ್ಚ್ 2025ರಂದು ನಡೆಯುವ ರಂಗೋತ್ಸವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ ಇವರು ವಹಿಸಲಿದ್ದು, ನಾಮನಿರ್ದೇಶಿತ ಸದಸ್ಯರಾದ ಸದಾಶಿವ ಡಿ. ಪಡುವರಿ ಇವರು ಶುಭಾಶಂಸನೆ ಮಾಡಲಿದ್ದಾರೆ. ಯಕ್ಷಗಾನ ಭಾಗವತರಾದ ಕೃಷ್ಣಯ್ಯ ಬೈಂದೂರು ಮತ್ತು ಖ್ಯಾತ ಗಾಯಕಿ ಕುಮಾರಿ ಮೇಘನಾ ಕುಂದಾಪುರ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಗಣೇಶ ದೇವಾಡಿಗ ಉಪ್ಪುಂದ ಇವರ ನಿರ್ದೇಶನದಲ್ಲಿ ಲಾವಣ್ಯ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ತಂಡದವರಿಂದ ‘ಶ್ರೀಕೃಷ್ಣ ಲೀಲೆ – ಕಂಸವಧೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ದಿನಾಂಕ 03 ಮಾರ್ಚ್ 2025ರಂದು ನಡೆಯುವ ರಂಗೋತ್ಸವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ. ಇವರು ವಹಿಸಲಿದ್ದು, ಮಾನ್ಯ ಶಾಸಕರಾದ ಗುರುರಾಜ ಗಂಟಿಹೊಳೆ ಇವರು ಶುಭಾಶಂಸನೆ ಮಾಡಲಿದ್ದಾರೆ. ಯಕ್ಷಗಾನ ಕಲಾವಿದರಾದ ಶ್ರೀಧರ ಗಾಣಿಗ ಉಪ್ಪುಂದ, ಪ್ರಶಾಂತ ಮಯ್ಯ ದಾರಿಮಕ್ಕಿ ಮತ್ತು ಶಶಿಧರ ಶೆಣೈ ನಾಯ್ಕನಕಟ್ಟೆ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಮಂಗಳೂರು ಮೀನನಾಥ ಇವರ ನಿರ್ದೇಶನದಲ್ಲಿ ಮಂಗಳೂರಿನ ಶ್ರೀ ನಂದಿಕೇಶ್ವರ ನಾಟಕ ಸಂಘ ಇವರಿಂದ ‘ಮುದುಕನ ಮದುವೆ’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 04 ಮಾರ್ಚ್ 2025ರಂದು ನಡೆಯುವ ರಂಗೋತ್ಸವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರವಂತೆ ಚೇತನ ಚಿಕಿತ್ಸಾಲಯದ ಡಾ. ರೂಪಶ್ರೀ ಮರವಂತೆ ಇವರು ವಹಿಸಲಿದ್ದು, ಸಾಫ್ಟ್ ವೇರ್ ಇಂಜಿನಿಯರ್ ಪ್ರವೀಣ್ ಶೆಟ್ಟಿ ಇವರು ಶುಭಾಶಂಸನೆ ಮಾಡಲಿದ್ದಾರೆ. ಹಿರಿಯ ಮದ್ದಲೆ ವಾದಕರಾದ ನಾರಾಯಣ ದೇವಾಡಿಗ ಹೆಗ್ಗಳೆಮನೆ ಮತ್ತು ಕೊಂಕಣಿ ರಂಗ ಕಲಾವಿದ ಜೋಸೆಫ್ ಫೆರ್ನಾಂಡಿಸ್ ಬೈಂದೂರು ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಮೇಘ ಸಮೀರ ಇವರ ನಿರ್ದೇಶನದಲ್ಲಿ ಮೈಸೂರಿನ ನಟನ ತಂಡದವರು ‘ಪ್ರಮೀಳಾರ್ಜುನೀಯಂ’ ನಾಟಕ ಪ್ರದರ್ಶನ ನೀಡಲಿದ್ದಾರೆ.
ದಿನಾಂಕ 05 ಮಾರ್ಚ್ 2025ರಂದು ನಡೆಯುವ ರಂಗೋತ್ಸವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರ್ವಾಹಣಾಧಿಕಾರಿ ವಿಷ್ಣು ಆರ್. ಪೈ ಇವರು ವಹಿಸಲಿದ್ದು, ಖ್ಯಾತ ರಂಗ ನಿರ್ದೇಶಕರಾದ ಡಾ. ಶ್ರೀಪಾದ್ ಭಟ್ ಉಡುಪಿ ಇವರು ಶುಭಾಶಂಸನೆ ಮಾಡಲಿದ್ದಾರೆ. ಹಿರಿಯ ಯಕ್ಷಗಾನ ಭಾಗವತರಾದ ಅಣ್ಣಪ್ಪ ದೇವಾಡಿಗ ಬಿಜೂರು, ಸಂಗೀತ ನಿರ್ದೇಶಕ ಗೀತಂ ಗಿರೀಶ್ ಮತ್ತು ಖ್ಯಾತ ಗಾಯಕಿ ಶ್ರೀಮತಿ ಪೂರ್ಣಿಮಾ ವಿ. ಪೈ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ‘ನಟನ’ ಮೈಸೂರು ಇವರಿಂದ ಡಾ. ಶ್ರೀಪಾದ್ ಭಟ್ ಇವರ ನಿರ್ದೇಶನದಲ್ಲಿ ‘ಉಷಾಹರಣ’ ನಾಟಕ ಪ್ರದರ್ಶನಗೊಳ್ಳಲಿದೆ.