ಬೆಂಗಳೂರು : ರಂಗಪಯಣ (ರಿ.) ಇದರ ವತಿಯಿಂದ ‘ರಂಗಪಯಣ ನಾಟಕೋತ್ಸವ -2025’ವನ್ನು ದಿನಾಂಕ 03 ನವೆಂಬರ್ 2025ರಿಂದ 07 ನವೆಂಬರ್ 2025ರವರೆಗೆ ಪ್ರತಿದಿನ ಸಂಜೆ 6-00 ಗಂಟೆಗೆ ಬೆಂಗಳೂರಿನ ಮಲ್ಲತ್ತಳ್ಳಿ ಸಮುಚ್ಚಯ ಭವನ ಕಲಾಗ್ರಾಮದಲ್ಲಿ ಆಯೋಜಿಸಲಾಗಿದೆ.
ದಿನಾಂಕ 03 ನವೆಂಬರ್ 2025ರಂದು ಉದ್ಘಾಟನಾ ಸಮಾರಂಭದ ಬಳಿಕ ರಾಜ್ ಗುರು ಇವರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಹೆಸರೆ ಇಲ್ಲದವರು’, ದಿನಾಂಕ 04 ನವೆಂಬರ್ 2025ರಂದು ‘ಬದುಕು ಕಳಿಸಿದ ಬೇಂದ್ರೆ’ ದ.ರಾ. ಬೇಂದ್ರೆ ಅವರ ರಚನೆಯ ಹಾಡುಗಳ ಹಬ್ಬ ಮತ್ತು ರಾಜ್ ಗುರು ಇವರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಭೂಮಿ’, ದಿನಾಂಕ 05 ನವೆಂಬರ್ 2025ರಂದು ಕುವೆಂಪು ಅವರ ರಚನೆಯ ಹಾಡುಗಳ ಗುಚ್ಛ ‘ಪುಟ್ಟಪ್ಪನ ಪದ್ಯಗಳು’ ಮತ್ತು ಮೈಮ್ ರಮೇಶ್ ರಂಗಾಯಣ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೈಸೂರಿನ ಜಿ.ಪಿ.ಐ.ಇ.ಆರ್. ರಂಗತಂಡ ಅಭಿನಯಿಸುವ ಆಂಟನ್ ಚೆಕಾವ್ ರ ‘ವಾರ್ಡ್ ನಂ 6’, ದಿನಾಂಕ 06 ನವೆಂಬರ್ 2025ರಂದು ಆದಿಮೂಲ ರಂಗ ತಂಡದಿಂದ ರಂಗಗೀತೆಗಳು ‘ಹೊಕ್ಕಳ ಬಳ್ಳಿಯ ಹಾಡು’ ಮತ್ತು ನಯನ ಸೂಡ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಸಾ.ರ. ಅಬೂಬಕ್ಕರ್ ಅವರ ಜೀವನ ಆಧಾರಿತ ನಾಟಕ ‘ಚಂದ್ರಗಿರಿ ತೀರದಲ್ಲಿ’, ದಿನಾಂಕ 07 ನವೆಂಬರ್ 2025ರಂದು ಸಮಾರೋಪ ಸಮಾರಂಭ ಮತ್ತು ರಾಜ್ ಗುರು ಇವರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಕ್ರಾಂತಿಯುಗ’ ನಾಟಕ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ 88847 64509 ಮತ್ತು 99641 40723 ಸಂಖ್ಯೆಯನ್ನು ಸಂಪರ್ಕಿಸಿರಿ.

