ಮೈಸೂರು : ಸಮತೆಂತೋ ಮೈಸೂರು ಮತ್ತು ನಿರಂತರ ಫೌಂಡೇಶನ್ (ರಿ.) ಮೈಸೂರು ಇವರ ಸಹಕಾರದಲ್ಲಿ ಡಾ. ನ. ರತ್ನ ಇವರ ಹೆಸರಿನಲ್ಲಿ ಶ್ರೀ ತರ್ನೀವ್ ಮತ್ತು ಎನ್. ಎಸ್. ಆನಂದ್ (ಬಾಬು) ಸ್ಥಾಪಿತ ‘ರಂಗರತ್ನ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ದಿನಾಂಕ 12 ಡಿಸೆಂಬರ್ 2024ರಂದು ಸಂಜೆ 6-00 ಗಂಟೆಗೆ ಮೈಸೂರಿನ ಮಾನಸ ಗಂಗೋತ್ರಿಯ ಗಾಂಧಿ ಭವನದಲ್ಲಿ ನಡೆಯಲಿದೆ.
ಸಮತೆಂತೋ ತಂಡದಿಂದ ರಂಗ ಗೀತೆಗಳ ಬಳಿಕ ನಟ ನಿರ್ದೇಶಕ ಸಂಘಟಕ ಶ್ರೀ ಹುಲಗಪ್ಪ ಕಟ್ಟಿಮನಿ ಇವರಿಗೆ ‘ರಂಗರತ್ನ ಪ್ರಶಸ್ತಿ’ ಪ್ರದಾನಮಾಡಲಾಗುವುದು. ಈ ಸಮಾರಂಭದಲಿ ಶ್ರೀಮತಿ ಲತ ರತ್ನ, ಹಿರಿಯ ರಂಗಕರ್ಮಿ ಪ್ರೊ. ಹೆಚ್.ಎಸ್. ಉಮೇಶ್, ಬೆಲ್ಲಿ ಮಾಸ್ಟರ್ ಶ್ರೀ ತರ್ನೀವ್ ಮತ್ತು ಅಭಿಯಂತರರು ಶ್ರೀ ಎನ್.ಎಸ್. ಆನಂದ್ ಇವರುಗಳು ಭಾಗವಹಿಸಲಿದ್ದಾರೆ.